ಚೇತರಿಕೊಳ್ಳುತ್ತಿರುವ ನಟಿ ಪಾರುಲ್ ಯಾದವ್

ಗುರುವಾರ, 2 ಫೆಬ್ರವರಿ 2017 (12:03 IST)
ಮುಂಬೈನ ತನ್ನ ಮನೆ ಸಮೀಪ ಬೀದಿ ನಾಯಿಗಳ ದಾಳಿಯಿಂದ ಗಾಯಗೊಂಡಿದ್ದ ನಟಿ ಪಾರುಲ್ ಯಾದವ್ ಈಗೀಗಷ್ಟೇ ಚೇತರಿಸಿಕೊಳ್ಳುತ್ತಿದ್ದಾರೆ ಎಂದುದ್ ಅವರ ಕುಟುಂಬ ಮೂಲಗಳು ತಿಳಿಸಿವೆ. ಹತ್ತು ದಿನಗಳ ಹಿಂದೆ 13ಕ್ಕೂ ಹೆಚ್ಚು ಬೀದಿನಾಯಿಗಳು ಪಾರು ಮೇಲೆ ದಾಳಿ ಮಾಡಿದ್ದವು.
 
ಪಾರುಲ್ ತಲೆಗೆ, ದೇಹ ಮತ್ತು ಕೈಗಳ ಮೇಲೆ ಗಾಯಗಳಾಗಿವೆ. ಮೈಮೇಲೆ ಗಂಭೀರವಾಗಿ ಆಗಿರುವ ಗಾಯಗಳಿಗೆ ಸಣ್ಣ ಶಸ್ತ್ರಚಿಕಿತ್ಸೆಯನ್ನೂ ಮಾಡಲಾಗಿದೆ ಎಂದು ಹೇಳಿರುವ ವೈದ್ಯರು ಅವರನ್ನು ಮನೆಗೆ ಕಳುಹಿಸಿದ್ದಾರಂತೆ. 
 
ಗೋವಿಂದಾಯ ನಮಃ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಅಡಿಯಿಟ್ಟ ಪಾರುಲ್ ಯಾದವ್ ಪ್ಯಾರ್‌ಗೆ ಆಗ್ಬಿಟ್ಟೈತೆ ಹಾಡಿನ ಮೂಲಕ ಜನಪ್ರಿಯರಾಗಿದ್ದಾರೆ. ಆ ಬಳಿಕ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ ಕನ್ನಡ ತಂಡಕ್ಕೆ ಆರಂಭದಿಂದಲೂ ಬೆಂಬಲ ವ್ಯಕ್ತಪಡಿಸುತ್ತಾ ಬಂದಿದ್ದಾರೆ ಪಾರುಲ್. ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ವೆಬ್‍ದುನಿಯಾ ಬಯಸುತ್ತದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ