ಡಾ.ರಾಜ್ ಮೊಮ್ಮಗನ ಚಿತ್ರರಂಗಕ್ಕೆ ಸ್ವಾಗತಿಸಿದ ಸ್ಟಾರ್ಸ್
ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಯುವರಾಜ್ ಸಿನಿಮಾ ಘೋಷಣೆಯಾಗುತ್ತಿದ್ದಂತೇ ಸ್ಯಾಂಡಲ್ ವುಡ್ ಕಲಾವಿದರು ಅವರನ್ನು ಸ್ವಾಗತಿಸಿದ್ದಾರೆ.
ನವರಸನಾಯಕ ಜಗ್ಗೇಶ್, ರಿಷಬ್ ಶೆಟ್ಟಿ, ಶ್ರೀಮುರಳಿ, ರವಿಶಂಕರ್ ಗೌಡ, ನಿರ್ದೇಶಕ ಚೇತನ್ ಕುಮಾರ್, ಕೃಷ್ಣ ಸೇರಿದಂತೆ ಅನೇಕರು ಸಾಮಾಜಿಕ ಜಾಲತಾಣದ ಮೂಲಕ ಯುವರಾಜ್ ಗೆ ಸ್ವಾಗತ ಕೋರಿದ್ದಾರೆ. ಇನ್ನು, ಅಭಿಮಾನಿಗಳು ಯುವರಾಜ್ ಕಟೌಟ್ ಗೆ ಪೂಜೆ ಮಾಡಿ ಅದ್ಧೂರಿಯಾಗಿ ರಾಜವಂಶದ ಕುಡಿಯನ್ನು ಚಿತ್ರರಂಗಕ್ಕೆ ಬರಮಾಡಿಕೊಂಡಿದ್ದಾರೆ.