ಆರೋಗ್ಯ ನೆಪವೊಡ್ಡಿ ಜಾಮೀನು ಕೋರಿದ ಸಂಜನಾಗೆ ತಪಾಸಣೆ ಮಾಡಲು ಸೂಚಿಸಿದ ಹೈಕೋರ್ಟ್

ಮಂಗಳವಾರ, 8 ಡಿಸೆಂಬರ್ 2020 (09:04 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ಸಂಜನಾ ಗಲ್ರಾನಿ ಅನಾರೋಗ್ಯ ನೆಪವೊಡ್ಡಿ ಜಾಮೀನು ನೀಡುವಂತೆ ಹೈಕೋರ್ಟ್ ಗೆ ಮನವಿ ಸಲ್ಲಿಸಿದ್ದರು.


ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಸಂಜನಾ ಆರೋಗ್ಯ ತಪಾಸಣೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದೆ. ಒಂದು ವೇಳೆ ಅವರಿಗೆ ಆರೋಗ್ಯ ಸಮಸ್ಯೆ ಗಂಭೀರವಾಗಿದ್ದರೆ ಅವರ ಜಾಮೀನು ಅರ್ಜಿ ಸ್ವೀಕೃತವಾಗುವ ಸಾಧ‍್ಯತೆಯಿದೆ. ಈ ನಡುವೆ ಸಿಸಿಬಿ ಅವರ ಮತ್ತು ಇತರ ಆರೋಪಿಗಳ ಡ್ರಗ್ ಸೇವನೆ ಪರೀಕ್ಷೆ ನಡೆಸಲು ಕೂದಲು ಪರೀಕ್ಷೆಗಾಗಿ ಸ್ಯಾಂಪಲ್ ಸಂಗ್ರಹಿಸಿದೆ. ಹೀಗಾಗಿ ಒಂದು ವೇಳೆ ಇದರಲ್ಲಿ ಸಿಕ್ಕಿಬಿದ್ದರೆ ಸಂಜನಾ ಜಾಮೀನು ಹಾದಿ ಮತ್ತಷ್ಟು ಕಗ್ಗಂಟಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ