ಇಂದಿನಿಂದ ಜೈಲ್ ನಲ್ಲಿ ಸಂಜನಾ-ರಾಗಿಣಿಗೆ ಸ್ಪೆಷಲ್ ಟ್ರೀಟ್ ಮೆಂಟ್ ಎಲ್ಲಾ ರದ್ದು
ಮಂಗಳವಾರ, 29 ಸೆಪ್ಟಂಬರ್ 2020 (11:56 IST)
ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಬಂಧಿತರಾಗಿರುವ ನಟಿಯರಾದ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿಗೆ ಇಂದಿನಿಂದ ಜೈಲ್ ನಲ್ಲಿ ಸಾಮಾನ್ಯ ಖೈದಿಗಳಂತೆ ಕಳೆಯುವ ಗತಿ ಬಂದಿದೆ.
ಸಂಜನಾ ಮತ್ತು ರಾಗಿಣಿಗೆ ಇದುವರೆಗೆ ಕ್ವಾರಂಟೈನ್ ಅವಧಿಯಲ್ಲಿದ್ದ ಕಾರಣ ವಿಶೇಷ ಸೌಲಭ್ಯವಿತ್ತು. ಇಬ್ಬರೂ ವಿಶೇಷ ಸೆಲ್ ನಲ್ಲಿದ್ದರು. ಜತೆಗೆ ಅವರಿದ್ದ ಕೊಠಡಿಗೇ ಊಟ, ಉಪಹಾರ ಸಿಗುತ್ತಿತ್ತು. ಆದರೆ ಇಂದಿನಿಂದ ಕ್ವಾರಂಟೈನ್ ಅವಧಿ ಮುಗಿದ ಹಿನ್ನಲೆಯಲ್ಲಿ ಇಬ್ಬರನ್ನೂ ಸಾಮಾನ್ಯ ಸೆಲ್ ಗೆ ವರ್ಗಾಯಿಸಲಾಗಿದ್ದು, ಇನ್ನು ಮುಂದೆ ಇಬ್ಬರೂ ಎಲ್ಲಾ ಕೆಲಸಗಳಿಗೂ ಸಾಮಾನ್ಯ ಖೈದಿಗಳಂತೇ ಕ್ಯೂನಲ್ಲಿ ನಿಂತು ಪಡೆಯಬೇಕಾಗುತ್ತದೆ. ಎಲ್ಲಾ ಸಾಮಾನ್ಯ ಖೈದಿಗಳಿಗೆ ನೀಡಲಾಗುವ ಸವಲುತ್ತಗಳೇ ಇವರಿಗೂ ಸಿಗಲಿದೆ.