ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಡ್ರಗ್ ಮಾಫಿಯಾಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ನಟಿ ರಾಗಿಣಿ ದ್ವಿವೇದಿಯನ್ನು ವಿಚಾರಣೆಗೆ ಕರೆದೊಯ್ಯುತ್ತಿದ್ದಂತೇ ನಟಿ ಸಂಜನಾಗೂ ಟೆನ್ಷನ್ ಶುರುವಾಗಿದೆ.
ರಾಗಿಣಿ ಆಪ್ತ ರವಿಶಂಕರ್ ಬಂಧನಕ್ಕೂ ಮೊದಲೇ ಸಂಜನಾ ಆಪ್ತ ರಾಹುಲ್ ನನ್ನೂ ಬಂಧಿಸಲಾಗಿತ್ತು. ಹೀಗಾಗಿ ಸಂಜನಾಗೂ ವಿಚಾರಣೆಗೆ ಹಾಜರಾಗಲು ಸಿಸಿಬಿ ನೋಟಿಸ್ ನೀಡುವ ಸಾಧ‍್ಯತೆಯಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಮಾಧ‍್ಯಮಗಳಿಗೆ ಹೇಳಿಕೆ ನೀಡಿರುವ ಸಂಜನಾ ನಾನು ಕಳೆದ ಡಿಸೆಂಬರ್ ನಿಂದ ಪಾರ್ಟಿಗಳಿಗೆ ಹೋಗುವುದನ್ನೇ ಬಿಟ್ಟಿದ್ದೇನೆ. ನನಗೆ ರಾಹುಲ್ ಅಣ್ಣನಿದ್ದಂತೆ. ಬೇರೆ ಯಾವುದೇ ಸಂಬಂಧವೂ ಇಲ್ಲ. ಅವರು ಆದಷ್ಟು ಬೇಗ ಇದರಿಂದ ಹೊರಬರುತ್ತಾರೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.
ಇನ್ನು, ಇಂದಿರಾನಗರದ ತಮ್ಮ ಅಪಾರ್ಟ್ ಮೆಂಟ್ ನಲ್ಲೇ ಇರುವ ಸಂಜನಾ ಕ್ಷಣ ಕ್ಷಣದ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.