ಸಂಜಯ್ ದತ್ ರಿಂದಲೇ ಕೆಜಿಎಫ್ 2 ಟೀಂಗೆ ಮುಂದೆ ಕಾದಿದೆಯಾ ತೊಂದರೆ?!

ಗುರುವಾರ, 6 ಆಗಸ್ಟ್ 2020 (11:37 IST)
ಬೆಂಗಳೂರು: ಕೆಜಿಎಫ್ 2 ಸಿನಿಮಾದಲ್ಲಿ ಅಧೀರ ಪಾತ್ರದ ಮೂಲಕ ಘರ್ಜಿಸಲಿರುವ ಬಾಲಿವುಡ್ ನಟ ಸಂಜಯ್ ದತ್ ರಿಂದಲೇ ಈಗ ಚಿತ್ರ ಬಿಡುಗಡೆಗೆ ಅಡ್ಡಿ ಎದುರಾಗಲಿದೆಯಾ? ಇಂತಹದ್ದೊಂದು ಅನುಮಾನ ಹುಟ್ಟಿಸಿವೆ ಕೆಲವು ಸೋಷಿಯಲ್ ಮೀಡಿಯಾ ಪೋಸ್ಟ್ ಗಳು.

 
ಕೆಜಿಎಫ್ 2 ನಲ್ಲಿ ಪಾತ್ರ ಮಾಡಿರುವ ಸಂಜಯ್ ದತ್ ಹಿಂದೆ ಮುಂಬೈ ಸರಣಿ ಬಾಂಬ್ ಸ್ಪೋಟ ಪ್ರಕರಣದ ಆರೋಪಿಗಳಿಗೆ ಅಕ್ರಮ ಶಸ್ತ್ರಾಸ್ತ್ರ ಇರಿಸಲು ತನ್ನ ಮನೆಯಲ್ಲಿ ಆಶ್ರಯ ನೀಡಿದ್ದರು ಎಂಬ ಆರೋಪದಲ್ಲಿ ಬಂಧಿತರಾದವರು. ಈ ಪ್ರಕರಣದಲ್ಲಿ ಸಂಜಯ್ ದತ್ ಗೆ ಶಿಕ್ಷೆಯೂ ಆಗಿತ್ತು.

ಆದರೆ ಇದೇ ಪ್ರಕರಣವನ್ನು ಮುಂದಿಟ್ಟುಕೊಂಡು ಕೆಜಿಎಫ್ 2 ಸಿನಿಮಾ ನೋಡುವ ಮೊದಲು ಸಂಜಯ್ ದತ್ ರ ಹಿನ್ನಲೆಯನ್ನು ನೋಡೋಣ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸುತ್ತಿದ್ದಾರೆ. ಈ ವಿಚಾರವೇ ದೊಡ್ಡದಾಗಿ ಕೆಜಿಎಫ್ 2 ಗೆ ವಿರೋಧ ವ್ಯಕ್ತವಾದರೂ ಅಚ್ಚರಿಯಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ