ಸಪ್ತ ಸಾಗರದಾಚೆ ಎಲ್ಲೊ ಸೈಡ್ ಬಿ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು?

ಬುಧವಾರ, 22 ನವೆಂಬರ್ 2023 (08:30 IST)
ಬೆಂಗಳೂರು: ರಕ್ಷಿತ್ ಶೆಟ್ಟಿ ನಾಯಕರಾಗಿರುವ ಸಪ್ತ ಸಾಗರದಾಚೆ ಎಲ್ಲೊ ಸೈಡ್ ಬಿ ಸಿನಿಮಾ ಬಿಡುಗಡೆಯಾಗಿ ನಾಲ್ಕು ದಿನಗಳಾಗಿವೆ.

ಈ ಸಿನಿಮಾ ಮೊದಲ ದಿನವೇ ಸಿನಿ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಮೊದಲ ಭಾಗದಂತೆ ಇಲ್ಲೂ ತೀವ್ರ ಪ್ರೇಮಕತೆಯಿದೆ. ಜೊತೆಗೆ ಸಾಕಷ್ಟು ಭಾವನಾತ್ಮಕ ಸನ್ನಿವೇಶಗಳಿವೆ. ರುಕ್ಮಿಣಿ ವಸಂತ್ ಜೊತೆಗೆ ಸೈಡ್‍ ಬಿಯಲ್ಲಿ ಚೈತ್ರಾ ಆಚಾರ್ ಕೂಡಾ ಪೈಪೋಟಿ ನೀಡುವಂತೆ ಅಭಿನಯಿಸಿದ್ದಾರೆ.

ಸಪ್ತ ಸಾಗರದಾಚೆ ಎಲ್ಲೊ ಸೈಡ್ ಬಿ ಮೊದಲ ದಿನ 2 ಕೋಟಿಗೂ ಅಧಿಕ ಗಳಿಕೆ ಮಾಡಿತ್ತು. ಇದೀಗ ನಾಲ್ಕು ದಿನಗಳಲ್ಲಿ ಗಳಿಕೆ ಇಳಿಮುಖವಾಗುತ್ತಾ ಬಂದಿದೆ. ಶನಿವಾರ 3.3 ಕೋಟಿ ರೂ. ಗಳಿಕೆ ಮಾಡಿತ್ತು. ಆದರೆ ಭಾನುವಾರ ಕೇವಲ 1.7 ಕೋಟಿ ರೂ. ಗಳಿಸಿತ್ತಷ್ಟೇ. ಇದೀಗ ಒಟ್ಟಾರೆಯಾಗಿ ಸಿನಿಮಾದ ಗಳಿಕೆ 7 ಕೋಟಿ ರೂ. ಸನಿಹ ಬಂದಿದೆ ಎನ್ನಲಾಗಿದೆ.

ಹಾಗಿದ್ದರೂ ಮೊದಲ ಮೂರು ದಿನಗಳಿಗೆ ಹೋಲಿಸಿದರೆ ಇದೀಗ ಗಳಿಕೆಯಲ್ಲಿ ತೀರಾ ಇಳಿಮುಖವಾಗುತ್ತಿರುವುದು ಗಮನಿಸಬೇಕಾದ ಅಂಶ. ಸಪ್ತ ಸಾಗರದಾಚೆ ಎಲ್ಲೊ ಸೈಡ್ ಒಟ್ಟಾರೆಯಾಗಿ 20 ಕೋಟಿ ರೂ.ನಷ್ಟು ಗಳಿಕೆ ಮಾಡಿತ್ತು ಎಂದು ಅಂದಾಜಿಸಲಾಗಿದೆ. ಆ ನಿಟ್ಟಿನಲ್ಲಿ ನೋಡಿದರೆ ಎರಡನೇ ಭಾಗ ಗಳಿಕೆ ಕಡಿಮೆಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ