ಚಿರು ಸರ್ಜಾ ಬರ್ತ್ ಡೇಗೆ ಒಂದಾದ ಮೇಘನಾ ರಾಜ್-ಸರ್ಜಾ ಕುಟುಂಬ

ಭಾನುವಾರ, 17 ಅಕ್ಟೋಬರ್ 2021 (09:45 IST)
ಬೆಂಗಳೂರು: ದಿವಂಗತ ನಟ ಚಿರು ಸರ್ಜಾರ ಜನ್ಮದಿನವಾದ ಇಂದು ಮೇಘನಾ ರಾಜ್ ಮತ್ತು ಚಿರು ಸರ್ಜಾ ಕುಟುಂಬದವರು ಒಟ್ಟಾಗಿ ಸಂದೇಶ ರವಾನಿಸಿದ್ದಾರೆ.


ಇಂದು ಚಿರು ಬರ್ತ್ ಡೇ ನಿಮಿತ್ತ ರಾಜಮಾರ್ತಾಂಡ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ. ಇದಲ್ಲದೆ, ಎರಡೂ ಕುಟುಂಬಗಳೂ ಸಾಮಾಜಿಕ ಜಾಲತಾಣದಲ್ಲಿ ಚಿರುವಿಗೆ ಜನ್ಮದಿನದ ಸ್ಮರಣೆ ಮಾಡಿದ್ದಾರೆ.

ಒಂದೇ ಫೋಟೋ, ಸಂದೇಶ ಪ್ರಕಟಿಸಿ, ಚಿರು ಕುಟುಂಬಸ್ಥರು ಎಂದು ಒಕ್ಕಣೆ ಬರೆದು ಮನೆ ಮಗನ ಹುಟ್ಟುಹಬ್ಬದ ಸ್ಮರಣೆ ಮಾಡಿದ್ದಾರೆ. ಸಹೋದರ ಧ್ರುವ ಸರ್ಜಾ ಅಣ್ಣನ ಫೋಟೋ ಪ್ರಕಟಿಸಿ ಐ ಲವ್ ಯೂ ಎಂದು ಸಂದೇಶ ಪ್ರಕಟಿಸಿದರೆ, ಮೇಘನಾ ಕೂಡಾ ಚಿರು ಜೊತೆಗಿನ ಖುಷಿಯ ಕ್ಷಣದ ಫೋಟೋ ಪ್ರಕಟಿಸಿ ನೀವು ನನ್ನ ಜೀವನದ ಬೆಳಕು ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ