ಸಾರ್ವಜನಿಕರಲ್ಲಿ ವಿನಂತಿ: ಇದು ತಾಂತ್ರಿಕವಾಗಿಯೂ ಗಟ್ಟಿತನ ಹೊಂದಿರೋ ಚಿತ್ರ!

ಶುಕ್ರವಾರ, 21 ಜೂನ್ 2019 (15:13 IST)
ಒಂದು ಚಿತ್ರ ಕಮರ್ಶಿಯಲ್ ಜಾಡಿನಲ್ಲಿಯೂ ಹೊಸತನದ ಹೆಜ್ಜೆ ಇಡಬೇಕೆಂದರೆ ಅದು ತಾಂತ್ರಿಕವಾಗಿಯೂ ಗಟ್ಟಿ ನೆಲೆಗಟ್ಟು ಹೊಂದಿರಬೇಕಾಗುತ್ತದೆ. ಇದೀಗ 21ರಂದು ಬಿಡುಗಡೆಯಾಗುತ್ತಿರೋ ಸಾರ್ವಜನಿಕರಲ್ಲಿ ವಿನಂತಿ ಚಿತ್ರ ಕೂಡಾ ತಾಂತ್ರಿಕವಾಗಿ ತುಂಬಾನೇ ವೀಶೇಷತೆಗಳನ್ನು ಹೊಂದಿದೆಯಂತೆ.  ಮೊನ್ನೆ ತಾನೇ ಬಿಡುಗಡೆಯಾಗಿರುವ ಟ್ರೈಲರ್ ಮತ್ತು ಈ ಹಿಂದೆ ಲಾಂಚ್ ಆಗಿದ್ದ ಟೀಸರ್ನಲ್ಲಿಯೇ ಅದರ ಲಕ್ಷಣಗಳು ಗೋಚರಿಸಿವೆ.
ಕೃಪಾ ಸಾಗರ್ ಅವರ ಚೊಚ್ಚಲ ನಿರ್ದೇಶನದ ಚಿತ್ರ ಸಾರ್ವಜನಿಕರಲ್ಲಿ ವಿನಂತಿ. ಈಗಾಗಲೇ ಹಲವಾರು ವರ್ಷಗಳಿಂದ ಚಿತ್ರರಂಗದ ಭಾಗವಾಗಿರುವ ಕೃಪಾಸಾಗರ್ ಹೊಸಾ ಅಲೆಯ ಚಿತ್ರದ ಮೂಲಕವೇ ನಿರ್ದೇಶಕರಾಗಬೇಕೆಂದು ಬಹು ವರ್ಷಗಳಿಂದ ತಯಾರಿ ಆರಂಭಿಸಿದ್ದರು. ಅದರ ಫಿಲವಾಗಿ ಮೂಡಿ ಬಂದಿರೋ ಸಾರ್ವಜನಿಕರಲ್ಲಿ ವಿನಂತಿ ಚಿತ್ರವನ್ನವರು ಪ್ರತೀ ಕೋನದಲ್ಲಿಯೂ ವಿಭಿನ್ನವಾಗಿರುವಂತೆ ರೂಪಿಸಿದ್ದಾರೆ.
ಅದೇ ರೀತಿ ತಾಂತ್ರಿಕವಾಗಿಯೂ ಶೀಮಂತಿಕೆಯಿಂದ ಕೂಡಿರಬೇಕೆಂಬ ಆಸೆಯಿಂದ ಆ ಜವಾಬ್ದಾರಿಯನ್ನು ಪ್ರತಿಭಾವಂತರ ತಂಡಕ್ಕೆ ಒಪ್ಪಿಸಿದ್ದಾರೆ. ಅಂದಹಾಗೆ ಈ ಚಿತ್ರವನ್ನು ಈಗಾಗಲೇ ಹಿಟ್ ಚಿತ್ರವನ್ನು ನೀಡಿರೋ ತಂಡವೇ ನಿರ್ವಹಿಸಿದೆ. ತಮಿಳಿನಲ್ಲಿ ಸೂಪರ್ ಹಿಟ್ ಆಗಿದ್ದ 96 ಚಿತ್ರಕ್ಕೆ ಕಾರ್ಯ ನಿರ್ವಹಿಸಿದ್ದ ತಂಡವೇ ಈ ಸಾರ್ವಜನಿಕರಲ್ಲಿ ವಿನಂತಿ ಚಿತ್ರವನ್ನೂ ರೂಪಿಸಿದೆ. ಈ ಕಾರಣದಿಂದಲೇ ಈ ಚಿತ್ರ ತಾಂತ್ರಿಕವಾಗಿಯೂ ಮೈಲಿಗಲ್ಲಿನಂತೆ ಮೂಡಿ ಬಂದಿದೆಯಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ