ಶಂಕರ್ ನಾಗ್ ಮಗಳು ಹೇಗಿದ್ದಾರೆ? ಏನು ಮಾಡ್ತಿದ್ದಾರೆ ಗೊತ್ತಾ?

ಗುರುವಾರ, 20 ಅಕ್ಟೋಬರ್ 2022 (08:20 IST)
Photo Courtesy: facebook
ಬೆಂಗಳೂರು: ಕನ್ನಡ ಸಿನಿಮಾ ರಂಗದ ದಿಗ್ಗಜ ದಿವಂಗತ ಶಂಕರ್ ನಾಗ್ ಪತ್ನಿ ಬಗ್ಗೆ ಎಲ್ಲರಿಗೂ ಗೊತ್ತು. ಅವರು ಈಗಲೂ ಪತಿಯ ಕನಸಾದ ರಂಗಶಂಕರ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ.

ಆದರೆ ಅವರ ಮಗಳು ಏನು ಮಾಡ್ತಿದ್ದಾರೆ ಗೊತ್ತಾ? ಶಂಕರ್ ನಾಗ್ ರನ್ನು ಸಿನಿ ಲೋಕ ಎಂದಿಗೂ ಮರೆಯಲ್ಲ. ಸಣ್ಣ ಕಾಲಾವಧಿಯಲ್ಲಿ ದೊಡ್ಡ ಸಾಧನೆ ಮಾಡಿದವರು ಶಂಕರ್ ನಾಗ್.

ಆದರೆ ಅವರ ಪುತ್ರಿ ಕಾವ್ಯಾ ನಾಗ್ ಅಪ್ಪನಂತೆ ಸಿನಿಮಾ ರಂಗಕ್ಕೆ ಬರಲೇ ಇಲ್ಲ. ಕಾವ್ಯಾ ನಾಗ್ ವಕೀಲೆ ವೃತ್ತಿ ಕಲಿತು ಬಳಿಕ ಕೆಲವು ಎನ್ ಜಿಒಗಳಿಗೆ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಈಗ ಮದುವೆಯಾಗಿ ಮುದ್ದಾದ ಮಕ್ಕಳೂ ಇದ್ದಾರೆ. ತಮ್ಮ ಗೆಳೆಯ ಸಲಿಲ್ ಜೊತೆ 2010 ರಲ್ಲಿ ಕಾವ್ಯಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅಪ್ಪನಂತೆ ಸಿನಿಮಾ ಲೋಕಕ್ಕೆ ಬಾರದೇ ಹೋದರೂ ತಮ್ಮದೇ ವೃತ್ತಿಯಲ್ಲಿ ಸಾಧನೆ ಮಾಡಿದ್ದಾರೆ.

-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ