ಮೈಸೂರಿನ ಡಾ. ರಾಜ್ ಟೀ ಸ್ಟಾಲ್ ಗೆ ಸಂಗಡಿಗರೊಂದಿಗೆ ಭೇಟಿ ಕೊಟ್ಟ ಶಿವಣ್ಣ ತೀರಾ ಸಾಮಾನ್ಯರಂತೆ ಹೊರಗೆ ಕಲ್ಲು ಬೆಂಚಿನ ಮೇಲೆ ಕುಳಿತು ಚಹಾ ಸವಿದಿದ್ದಲ್ಲದೆ, ಅಲ್ಲಿ ನೆರೆದಿದ್ದ ಅಭಿಮಾನಿಗಳೊಂದಿಗೆ ಸೆಲ್ಫೀಗೆ ಪೋಸ್ ಕೊಟ್ಟು ಖುಷಿಕೊಟ್ಟಿದ್ದಾರೆ. ಇದ್ದಕ್ಕಿದ್ದಂತೆ ಶಿವಣ್ಣರನ್ನು ಕಂಡ ಅಭಿಮಾನಿಗಳು ಅವರ ಸರಳತೆಗೆ ಮಾರು ಹೋಗಿದ್ದು, ಪುಷ್ಪ ಗುಚ್ಛ ನೀಡಿ ತಮ್ಮ ಕೈಲಾದ ರೀತಿಯಲ್ಲಿ ಸನ್ಮಾನ ಮಾಡಿ ಬೀಳ್ಕೊಟ್ಟಿದ್ದಾರೆ.