ಗಂಧದ ಗುಡಿ ಟೀಸರ್ ನೋಡಿ ಶಾಕ್ ಆಯ್ತು ಎಂದ ಶಿವರಾಜ್ ಕುಮಾರ್
ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಣ್ಣ ಟೀಸರ್ ನೋಡಿ ಶಾಕ್ ಆಯ್ತು, ಜೊತೆಗೆ ಬೇಸರವೂ ಆಯ್ತು ಎಂದಿದ್ದಾರೆ. ಅದಕ್ಕೆ ಕಾರಣವನ್ನೂ ಅವರು ಹೇಳಿದ್ದಾರೆ.
ಇಂಥಾ ವ್ಯಕ್ತಿ ಈಗ ನಮ್ಮ ಜೊತೆಗಿಲ್ಲವಲ್ಲಾ ಎಂಬ ಬೇಸರವಾಯಿತು. ಆದರೆ ಅವನು ಮಾಡಿದ ಪ್ರಯತ್ನ ಅದನ್ನು ಯಾರೂ ಮಾಡಕ್ಕಾಗಲ್ಲ. ಅವನ ನೆನಪು ಕಾಡುತ್ತೆ. ಗಂಧದ ಗುಡಿ ಟೈಟಲ್ ಗೂ ನಮ್ಮ ಫ್ಯಾಮಿಲಿಗೂ ಹತ್ತಿರದ ಸಂಬಂಧ. ಕಾಡಿನ ಬಗ್ಗೆ ಸಾಕಷ್ಟು ಸಿನಿಮಾಗಳು ಬಂದಿವೆ.ಈ ಕೊರೋನಾ ಟೈಂನಲ್ಲಿ ಇಂತಹದ್ದೊಂದು ಪ್ರಯತ್ನ ನಿಜಕ್ಕೂ ಅರ್ಥಪೂರ್ಣ ಎಂದು ಶಿವಣ್ಣ ಹೇಳಿದ್ದಾರೆ.