ಬೆಂಗಳೂರು: ಕನ್ನಡಕ್ಕೆ ಡಬ್ಬಿಂಗ್ ಚಿತ್ರ ಬೇಡ ಎಂದು ಇಷ್ಟು ದಿನ ಖಡಾಖಂಡಿತವಾಗಿ ವಿರೋಧಿಸುತ್ತಿದ್ದ ನಟ ಶಿವರಾಜ್ ಕುಮಾರ್ ಇದೀಗ ತಮ್ಮ ನಿಲುವು ಬದಲಿಸಿದ್ದಾರೆ.
ಕನ್ನಡಕ್ಕೆ ಡಬ್ಬಿಂಗ್ ಚಿತ್ರಗಳು ಬೇಕೋ ಬೇಡವೋ ಎಂಬುದನ್ನು ಪ್ರೇಕ್ಷಕರೇ ನಿರ್ಧರಿಸಲಿ ಎಂದಿದ್ದಾರೆ. ಅವರಿಗೇ ಬಿಟ್ಟು ಬಿಡೋಣ. ಪ್ರೇಕ್ಷಕರು ಬಯಸಿದರೆ, ಡಬ್ಬಿಂಗ್ ಚಿತ್ರಗಳು ಪ್ರಸಾರವಾಗಲಿ. ಇಲ್ಲವಾದರೆ ಬೇಡ ಎಂದಿದ್ದಾರೆ.
ಸದ್ಯಕ್ಕೆ ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಬಹುನಿರೀಕ್ಷಿತ ಬಾಹುಬಲಿ 2 ಸಿನಿಮಾ ಕನ್ನಡಕ್ಕೆ ಡಬ್ಬಿಂಗ್ ಆಗಬೇಕೋ ಬೇಡವೋ ಎಂದು ಚರ್ಚೆಯಾಗುತ್ತಿದೆ. ಈ ಹಿನ್ನಲೆಯಲ್ಲಿ ಶಿವಣ್ಣ ಈ ಹೇಳಿಕೆ ಮಹತ್ವ ಪಡೆದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ