ಆಸ್ಪತ್ರೆಯಲ್ಲಿರುವ ದರ್ಶನ್‌ಗೆ ಶಾಕಿಂಗ್ ಸುದ್ದಿ: ಸಂಕಷ್ಟ ತಂದಿಟ್ಟ ಪೊಲೀಸರು

Sampriya

ಶನಿವಾರ, 23 ನವೆಂಬರ್ 2024 (14:28 IST)
ಬೆಂಗಳೂರು: ನಟ ದರ್ಶನ್ ಗ್ಯಾಂಗ್‌ನಿಂದ ಹತ್ಯೆಗೀಡಾದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತೇ 1300 ಪುಟಗಳ ಹೆಚ್ಚುವರಿ ಚಾರ್ಜ್ ಶೀಟ್ ಅನ್ನು ಸಿಸಿಹೆಚ್‌ 57ನೇ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ.

 ರೇಣುಕಾಸ್ವಾಮಿ ಪ್ರಕರಣ ಸಂಬಂಧ  ಮಹತ್ವದ ಅಂಶಗಳನ್ನು ಒಳಗೊಂಡಿರುವ ಹೆಚ್ಚುವರಿ ಚಾರ್ಜ್ ಶೀಟ್ ಅನ್ನು ತನಿಖಾಧಿಕಾರಿ ಎಸಿಪಿ ಚಂದನ್ ಕುಮಾರ್ ನ್ಯಾಯಾಲಯಕ್ಕೆ ಆಗಮಿಸಿ ಸಲ್ಲಿಕೆ ಮಾಡಿದರು.

ಬರೋಬ್ಬರಿ 1300 ಪುಟಗಳ ಈ ಚಾರ್ಜ್ ಶೀಟ್‌ನಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ, ಕೆಲ ಸಾಕ್ಷ್ಯಗಳ ಹೇಳಿಕೆಗಳು, ಪುನೀತ್ ಮೊಬೈಲ್‌ನಿಂದ ರಿಟ್ರೀವ್ ಮಾಡಲಾದ 8 ಪೋಟೋಗಳು ಸೇರಿದಂತೆ ಮಹತ್ವದ ದಾಖಲೆಗಳನ್ನು ಇದರಲ್ಲಿ ಸೇರಿಸಲಾಗಿದೆ.

ಇದರಿಂದ ದರ್ಶನ್‌ಗೆ ಮತ್ತಷ್ಟು ಸಂಕಷ್ಟ ಎದುರಾಗಿದ್ದು, ಈಗಾಗಲೇ ಪೊಲೀಸರು ರಿಟ್ರೀವ್ ಮಾಡಿದ ಮೊಬೈಲ್‌ನಲ್ಲಿ ರೇಣುಕಾಸ್ವಾಮಿ ಮೃತದೇಹದ ಎದುರು ದರ್ಶನ್ ನಿಂತಿರುವ ಫೋಟೋ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ