ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ ಚಿತ್ರ ಶ್ವೇತಾ ಶ್ರೀವಾಸ್ತವ್‌ರನ್ನು ಗುರುತಿಸುವಂತೆ ಮಾಡಿದ ಚಿತ್ರ. ಆ ಬಳಿಕ ಫೇರ್ ಅಂಡ್ ಲವ್ಲಿ ಚಿತ್ರದಲ್ಲಿನ ಅಭಿನಯಕ್ಕಾಗಿ ಫಿಲಂಫೇರ್ ಪ್ರಶಸ್ತಿ ಪಡೆದರು. ಶ್ವೇತಾ ಅಭಿನಯದ ಮೊದಲ ಚಿತ್ರ ಮುಖಾಮುಖಿ. ಆ ದಿನಗಳು ಚಿತ್ರದಲ್ಲಿ ಕೊತ್ವಾಲ್‌ರ ಪತ್ನಿಯಾಗಿ ಕಾಣಿಸಿಕೊಂಡಿದ್ದರು. ಇತ್ತೀಚೆಗಿನ ಕಿರುಗೂರಿನ ಗಯ್ಯಾಳಿಗಳು ಚಿತ್ರದ ದಾನಮ್ಮ ಪಾತ್ರದ ಮೂಲಕ ಅವರು ತಾವು ಯಾವುದೇ ಪಾತ್ರಕ್ಕೂ ಸಿದ್ಧ ಎಂಬುದನ್ನು ನಿರೂಪಿಸಿದ್ದರು.