SIIMA ಅವಾರ್ಡ್‌ 2024, ದರ್ಶನ್ ಹೆಸರು ಹೇಳುತ್ತಿದ್ದ ಹಾಗೇ ಅಭಿಮಾನಿಗಳಿಂದ ಸಿಳ್ಳೆ, ಚಪ್ಪಾಳೆ

Sampriya

ಸೋಮವಾರ, 16 ಸೆಪ್ಟಂಬರ್ 2024 (18:03 IST)
Photo Courtesy X
ಈ ಬಾರಿಯ ಸೈಮಾ ಅವಾರ್ಡ್ ಕಾರ್ಯಕ್ರಮ ದುಬೈನಲ್ಲಿ ಅದ್ದೂರಿಯಾಗಿ ನಡೆದಿದ್ದು, ಕನ್ನಡ ಸಿನಿಮಾ ರಂಗವು ಹಲವು ಪ್ರಶಸ್ತಿಗಳನ್ನು  ಬಾಚಿಕೊಂಡಿದೆ.

ಇನ್ನೂ ಕನ್ನಡದ ಸೂಪರ್ ಹಿಟ್ ದರ್ಶನ್ ಅಭಿನಯದ ಕಾಟೇರ ಸಿನಿಮಾ ಸೈಮಾದಲ್ಲಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ.

ಅತ್ಯುತ್ತಮ ಚಿತ್ರವಾಗಿ ಕಾಟೇರ, ಅತ್ಯುತ್ತಮ ಚೊಚ್ಚಲ ನಟಿಯಾಗಿ ಆರಾಧನಾ ರಾಮ್, ಅತ್ಯುತ್ತಮ ಸಂಗೀತ ನಿರ್ದೇಶಕರಾಗಿ ವಿ ಹರಿಕೃಷ್ಣ, ಕಾಟೇರಾ ಸಿನಿಮಾದ ಹಾಡಿಗಾಗಿ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಮಂಗ್ಲಿಗೆ ಲಭಿಸಿದೆ.

ಅತ್ಯುತ್ತಮ ಕಾಟೇರ ಸಿನಿಮಾದ ಪ್ರಶಸ್ತಿ ಸ್ವೀಕರಿಸುವ ವೇಳೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರು ದರ್ಶನ್ ನೆನೆದು ಭಾವುಕರಾಗಿದ್ದಾರೆ.

ಈ ಪ್ರಶಸ್ತಿಯನ್ನು ಪಡೆಯಲು ಮುಖ್ಯ ಕಾರಣರಾದ ದರ್ಶನ್‌ಗೆ ಧನ್ಯವಾದ. ಈ ಸಿನಿಮಾ ಕನ್ನಡದಲ್ಲಿ ಸೂಪರ್ ಹಿಟ್ ಸಿನಿಮಾ ಇದಾಗಿದ್ದು, ಕನ್ನಡ ಜನತೆಗೆ ಧನ್ಯವಾದಗಳು ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ