ಗಾಯಕ ವಿಜಯ್ ಪ್ರಕಾಶ್ ಗೆ ಪಿತೃವಿಯೋಗ

ಸೋಮವಾರ, 8 ಏಪ್ರಿಲ್ 2019 (08:54 IST)
ಬೆಂಗಳೂರು: ಜನಪ್ರಿಯ ಗಾಯಕ ವಿಜಯ್ ಪ್ರಕಾಶ್ ತಂದೆ ಎಲ್. ರಾಮಶೇಷ ಅನಾರೋಗ್ಯದ ಹಿನ್ನಲೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು.


ಜೀ ಕನ್ನಡ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಆಗಮಿಸಿದ್ದ ತಮ್ಮ ತಂದೆ ರಾಮಶೇಷ ಬಗ್ಗೆ ವಿಜಯ್ ಪ್ರಕಾಶ್ ಸಾಕಷ್ಟು ಹೇಳಿಕೊಂಡಿದ್ದರು. ತಮ್ಮ ಪ್ರೀತಿಯ ತಂದೆಯನ್ನು ಕಳೆದುಕೊಂಡ ದುಃಖದಲ್ಲಿ ವಿಜಯ್ ಪ್ರಕಾಶ್ ಅವರಿದ್ದಾರೆ.

ಆದರೆ ಸದ್ಯಕ್ಕೆ ಅಮೆರಿಕಾದಲ್ಲಿ ಕಾರ್ಯಕ್ರಮ ನೀಡಲು ತೆರಳಿರುವ ವಿಜಯ್ ಪ್ರಕಾಶ್ ತಂದೆಯ ನಿಧನದ ಸುದ್ದಿ ಕೇಳಿ ಕಾರ್ಯಕ್ರಮ ಮೊಟಕುಗೊಳಿಸಿ ಹುಟ್ಟೂರು ಮೈಸೂರಿಗೆ ಆಗಮಿಸುತ್ತಿದ್ದಾರೆ. ಬಳಿಕವಷ್ಟೇ ಅಂತಿಮ ಕ್ರಿಯೆ ನಡೆಯಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ