ಸಣ್ಣ ಬಜೆಟ್ ಸಿನಿಮಾಗಳಿಗೆ ಬೇಡಿಕೆ ಹೆಚ್ಚಾಯ್ತು! ಚಿತ್ರಮಂದಿರಗಳಿಗೆ ಬೇಡಿಕೆ ಕಡಿಮೆಯಾಯ್ತು!

ಸೋಮವಾರ, 27 ಜುಲೈ 2020 (10:08 IST)
ಬೆಂಗಳೂರು: ಲಾಕ್ ಡೌನ್ ಎಂಬ ಬ್ರೇಕ್ ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ಟ್ರೆಂಡ್ ಹುಟ್ಟು ಹಾಕಿದೆ. ಲಾಕ್ ಡೌನ್ ನಿಂದಾಗಿ ಎಲ್ಲಾ ರಂಗದಂತೇ ಚಿತ್ರರಂಗವೂ ನಷ್ಟದಲ್ಲಿದೆ.


ಹೀಗಾಗಿ ಇತ್ತೀಚೆಗಿನ ದಿನಗಳಲ್ಲಿ ಸಣ್ಣ ಬಜೆಟ್ ನ ಸಿನಿಮಾಗೆ ನಿರ್ಮಾಪಕರು ಒಲವು ತೋರುತ್ತಿದ್ದಾರೆ. ಸ್ಟಾರ್ ನಟರಿಗಿಂತ ಹೊಸಬರ ಸಿನಿಮಾಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಸಣ್ಣ ಬಜೆಟ್ ನಲ್ಲಿ ಸಿನಿಮಾ ಮಾಡಿ ಒಟಿಟಿ ಮೂಲಕ ರಿಲೀಸ್ ಮಾಡುವ ಹೊಸ ಟ್ರೆಂಡ್ ಶುರುವಾಗಿದೆ.

ಇದಕ್ಕೆ ಪುನೀತ್ ರಾಜಕುಮಾರ್ ನಿರ್ಮಾಣದ ‘ಲಾ’, ಫ್ರೆಂಚ್ ಬಿರಿಯಾನಿ ಉದಾಹರಣೆ. ಇತ್ತೀಚೆಗೆ ರಕ್ಷಿತ್ ಶೆಟ್ಟಿ ಕೂಡಾ ಸಣ್ಣ ಬಜೆಟ್ ನ ಸಿನಿಮಾವೊಂದರ ಸ್ಕ್ರಿಪ್ಟ್ ತಯಾರಿಸುತ್ತಿರುವುದಾಗಿ ಹೇಳಿದ್ದಾರೆ. ಇದರಿಂದಾಗಿ ಚಿತ್ರಮಂದಿರಗಳಿಗೆ ಮುಂದಿನ ದಿನಗಳಲ್ಲಿ ನಷ್ಟವಾಗಬಹುದು.

ಆದರೆ ಲಾಕ್ ಡೌನ್ ಕನ್ನಡ ಸಿನಿಮಾ ಲೋಕದಲ್ಲಿ ತಂತ್ರಜ್ಞಾನದ ಪರಿಣಾಮಕಾರಿ ಬಳಕೆಗೆ ವೇದಿಕೆಯಾಗಿದೆ. ಜತೆಗೆ ಆರ್ಥಿಕ ನಷ್ಟ ತುಂಬಲು ಹೊಸ ದಾರಿ ಕಂಡುಕೊಂಡಂತಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ