ಕೆನ್ನೆ ಮೇಲೆ ಆ ರಂಧ್ರಗಳನ್ನು ಯಾಕೆ ಮಾಡಿದರು? ಏನಿರಬಹುದು ಇದಕ್ಕೆ ಕಾರಣ ಅನ್ನೋ ಚರ್ಚೆ ನಡೆಯುತ್ತಿದೆ. ಸಾಮಾನ್ಯವಾಗಿ ಯಾರಾದರು ಮರಣಿಸಿದರೆ..ಅವರ ದೇಹ ಕೆಲವು ದಿನಗಳ ಕಾಲ ಕೆಡದಂತೆ ಇರಲು ವೈದ್ಯರು ’ಎಮಾಲ್ಮಿಂಗ್’ ಮಾಡುತ್ತಿರುತ್ತಾರೆ. ದೇಹಕ್ಕೆ ಕೆಲವು ರಾಸಾಯನಿಕಗಳನ್ನ, ಔಷಧಿಗಳಿಂದ ಶುದ್ಧಿ ಮಾಡುವುದರೊಂದಿಗೆ, ದೇಹದೊಳಕ್ಕೂ ಔಷಧಿಗಳನ್ನು ಸೇರಿಸುತ್ತಾರೆ.
ಮೃತದೇಹದಲ್ಲಿನ ರಕ್ತ ಹೊರಗೆ ತೆಗೆದು, ರಸಾಯನಿಕಗಳನ್ನು ದೇಹಕ್ಕೆ ಸೇರಿಸುವ ಪ್ರಕ್ರಿಯೆ ಇದು. ಆದರೆ ಸಹಜವಾಗಿ ಸೂಚಿಯನ್ನು ಕತ್ತಿನ ಹಿಂಭಾಗ ಅಥವಾ ತೊಡೆಸಂಧುಗಳಲ್ಲಿ ಹಾಕುತ್ತಾರೆ. ಜಯಲಲಿತಾ ಅವರ ಪಾರ್ಥೀವ ದೇಹಕ್ಕೂ ವೈದ್ಯರು ಈ ರೀತಿ ಮಾಡಿರುವ ಸಾಧ್ಯತೆಗಳಿವೆ.
ಜಯಲಲಿತಾ ಅವರಿಗೆ ಹೃದಯಾಘಾತವಾದಾಗಿನಿಂದ ಅವರು ಚಿರನಿದ್ರೆಗೆ ಜಾರುವವರೆಗೂ ವೈದ್ಯರು ’ಎಕ್ಮೋ’ ಚಿಕಿತ್ಸೆ ಮಾಡಿದ್ದಾರೆ. ಅದೇ ರೀತಿ ಎಮಾಲ್ಮಿಂಗ ಸಹ ಮಾಡಿರಬಹುದು. ಇದಕ್ಕಾಗಿ ಸೂಚಿ ಚುಚ್ಚುವಂತಹ ಪರಿಸ್ಥಿತಿ ಬಂದಿರಬಹುದು. ಆದರೆ ಕೆನ್ನೆ ಮೇಲೆ ರಂಧ್ರಗಳು ಕಾಣಿಸಿಕೊಂಡಿರುವುದು ಇದು ಎಮಾಲ್ಮಿಂಗ್ ನಿಂದ ಆಗಿರುವುದಾ ಅಥವಾ ಬೇರೆ ಚಿಕಿತ್ಸೆಗಾಗಿ ಮಾಡಿದ ರಂಧ್ರಗಳಾ ಅನ್ನೋ ಚರ್ಚೆ ನಡೆಯುತ್ತಿದೆ.