ಒಟ್ಟಿಗೆ ಫೋಸ್ ಕೊಟ್ಟ ಶ್ರೀಲೀಲಾ, ಸಮಂತಾ ರುತ್ ಪ್ರಭು, ಹಾಟ್‌ ಲುಕ್‌ಗೆ ಎಲ್ಲರೂ ಫಿದಾ

Sampriya

ಶುಕ್ರವಾರ, 27 ಜೂನ್ 2025 (16:27 IST)
Photo Credit X
ಬೆಂಗಳೂರು:  ಕಳೆದ ವರ್ಷ ಪುಷ್ಪಾ 2 ನಲ್ಲಿ ಶ್ರೀಲೀಲಾ ಸ್ಪೆಷಲ್ ಸಾಂಗ್‌ಗೆ ಹೆಜ್ಜೆಹಾಕಿದ್ದರು. ಈ ಹಿಂದೆ ಸಮಂತಾ ಅವರು ಕಾಣಿಸಿಕೊಂಡ ಸ್ಪೆಷಲ್ ಸಾಂಗ್‌ನಲ್ಲಿ ಶ್ರೀಲೀಲಾ ಅವರು ಹೆಜ್ಜೆಹಾಕಿದ್ದರು. ಸಮಂತಾ ಬದಲಿಗೆ ಶ್ರೀಲೀಳಾ ಆಯ್ಕೆಯಾದಾಗ ಇವರಿಬ್ಬರ ಮಧ್ಯೆ ಸರಿಯಿಲ್ಲ ಎಂಬ ವದಂತಿ ಹರಿದಾಡಿತ್ತು. 

ಆದರೆ ಇದೀಗ ಆ ಎಲ್ಲ ವದಂತಿಗೆ ನಟಿಯರಿಬ್ಬರು ಒಟ್ಟಾಗಿ ಕಾಣಿಸಿಕೊಂಡು ಪೋಸ್ ನೀಡುವ ಮೂಲಕ ಅಂತ್ಯ ಹಾಡಿದ್ದಾರೆ. 

ಸಮಂತಾ ರುತ್ ಪ್ರಭು ಮತ್ತು ಶ್ರೀಲೀಲಾ ಅವರು ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಆತ್ಮೀಯವಾಗಿ ಕಾಣಿಸಿಕೊಂಡಿದ್ದರು. ನಟಿಯರಿಬ್ಬರ ಸ್ಟೈಲಿಶ್ ಲುಕ್‌ಗೆ ಪಡ್ಡೆ ಹೈಕಳು ಫುಲ್ ಖುಷ್ ಆಗಿದ್ದಾರೆ. 

ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿರುವ ಫೋಟೋದಲ್ಲಿ, ಸಮಂತಾ ಮತ್ತು ಶ್ರೀಲೀಲಾ ಒಬ್ಬರಿಗೊಬ್ಬರು, ಕೈ ಜೋಡಿಸಿ, ಪ್ರೀತಿ ಮತ್ತು ಸ್ನೇಹವನ್ನು ಹೊರಹಾಕಿದ್ದಾರೆ.

ಪುಷ್ಪಾ 2 ಬಿಡುಗಡೆಯ ನಂತರ ಬಿರುಕು ಮೂಡಿದೆ ಎಂಬ ವದಂತಿಗಳು ಹರಡಿದ ನಂತರ ಸಮಂತಾ ಮತ್ತು ಶ್ರೀಲೀಲಾ ಸಾರ್ವಜನಿಕವಾಗಿ ಒಟ್ಟಿಗೆ ಪೋಸ್ ನೀಡಿದ್ದು ಇದೇ ಮೊದಲು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ