ಟಾಲಿವುಡ್ ನಲ್ಲಿ ಬ್ಯುಸಿಯಾದರು ಕನ್ನಡತಿ ಶ್ರೀಲೀಲಾ

ಮಂಗಳವಾರ, 9 ಮಾರ್ಚ್ 2021 (10:51 IST)
ಬೆಂಗಳೂರು: ಕನ್ನಡದಲ್ಲಿ ಈಗಷ್ಟೇ ಪ್ರವರ್ಧಮಾನಕ್ಕೆ ಬರುತ್ತಿರುವ ನಟಿ ಶ್ರೀಲೀಲಾ ಈಗ ತೆಲುಗಿನಲ್ಲಿ ಬ್ಯುಸಿಯಾಗುವ ಲಕ್ಷಣ ತೋರುತ್ತಿದ್ದಾರೆ.


ತೆಲುಗಿನಲ್ಲಿ ಶ್ರೀಲೀಲಾ ಎರಡನೇ ಸಿನಿಮಾ ಒಪ್ಪಿಕೊಂಡಿದ್ದಾರೆ. ಸದ್ಯಕ್ಕೆ ಕನ್ನಡದಲ್ಲಿ ಧನ್ವೀರ್ ಗೌಡ ಜೊತೆಗೆ ಬೈ ಟು ಲವ್, ಧ್ರುವ ಸರ್ಜಾ ಜೊತೆಗೆ ಭರ್ಜರಿ ಸಿನಿಮಾ ಒಪ್ಪಿಕೊಂಡಿರುವ ಶ್ರೀಲೀಲಾ ತೆಲುಗಿನಲ್ಲಿ ಎರಡನೇ ಸಿನಿಮಾಗೆ ಸಹಿ ಹಾಕಿದ ಸುದ್ದಿ ಬಂದಿದೆ.

ಈ ಬಾರಿ ತೆಲುಗಿನಲ್ಲಿ ನಟ ರವಿ ತೇಜಾ ಜೊತೆಗೆ ಅಭಿನಯಿಸುವ ಭರ್ಜರಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈ ಸಿನಿಮಾಗೆ ಇನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ಇಬ್ಬರು ನಾಯಕಿಯರ ಪೈಕಿ ಶ್ರೀಲೀಲಾ ಒಬ್ಬರಾಗಿದ್ದಾರೆ. ಮುಂದಿನ ತಿಂಗಳು ಚಿತ್ರದ ಶೂಟಿಂಗ್ ಆರಂಭವಾಗುವ ಸಾಧ್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ