ಪಾತ್ರೆ ತೊಳೆಯದಿದ್ದರೆ ಪತ್ನಿಗೆ ಕೋಪ ಬರುತ್ತೆ! ಶ್ರೀಮುರಳಿ ಫನ್ನಿ ಫೋಟೋ ವೈರಲ್
ಇದನ್ನು ನೋಡಿದ ನಟ ವಸಿಷ್ಠ ಸಿಂಹ ಒಳ್ಳೆ ಕೆಲಸ ಬ್ರದರ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದರೆ ಮತ್ತೆ ಕೆಲವರು ಅಂತೂ ಒಳ್ಳೆ ಗಂಡ ಆಗ್ತಿದ್ದೀರಾ ಎಂದು ಕಾಲೆಳೆದಿದ್ದಾರೆ. ವಿಶೇಷವೆಂದರೆ ಪತಿಯ ಪೋಸ್ಟ್ ಗೆ ಪತ್ನಿ ವಿದ್ಯಾ ಶ್ರೀಮುರಳಿ ಕೂಡಾ ಕಾಮೆಂಟ್ ಮಾಡಿದ್ದು, ನಾಳೆಯಿಂದ ಸರಿಯಾದ ಹೊತ್ತಿಗೆ ಊಟ ಮಾಡಬೇಕು. ಇಲ್ಲಾಂದ್ರೆ ಹೋಂ ಡೆಲಿವರಿಯೂ ಇರಲ್ಲ. ನನ್ನ ಇಷ್ಟ ಮತ್ತು ನಿಮ್ಮ ಕಷ್ಟ ಎಂದು ಲೈಟಾಗಿ ಬೆದರಿಕೆ ಹಾಕಿದ್ದಾರೆ!