ಅರ್ಜುನ್ ಸರ್ಜಾ ಜತೆಗೆ ಸಂಧಾನಕ್ಕೆ ಶೃತಿ ಹರಿಹರನ್ ಬೇಡಿಕೆಯೇನು ಗೊತ್ತಾ?!
ಹಿರಿಯ ನಟ ಅಂಬರೀಷ್ ನೇತೃತ್ವದಲ್ಲಿ ಚಿತ್ರರಂಗದ ಪ್ರಮುಖರ ಸಮ್ಮುಖದಲ್ಲಿ ಶೃತಿ ಮತ್ತು ಅರ್ಜುನ್ ಸರ್ಜಾ ನಡುವೆ ಸಂಧಾನ ಮಾತಕತೆ ನಡೆಯಲಿದೆ.
ಆದರೆ ಈ ಸಂಧಾನ ಸಭೆಯಲ್ಲಿ ಶೃತಿ ಬೇಡಿಕೆಯೇನು ಗೊತ್ತಾ? ಮೂಲಗಳ ಪ್ರಕಾರ ತಾವು ಅಂದು ಮಾಡಿದ ತಪ್ಪಿಗೆ ಅರ್ಜುನ್ ಸರ್ಜಾ ಲಿಖಿತ ರೂಪದಲ್ಲಿ ತಪ್ಪೊಪ್ಪಿಗೆ ಪತ್ರ ಬರೆದುಕೊಡಬೇಕು ಎಂದು ಶೃತಿ ಬೇಡಿಕೆಯಿಡುವ ಸಾಧ್ಯತೆಯಿದೆ. ಒಂದು ವೇಳೆ ಅರ್ಜುನ್ ಇದಕ್ಕೆ ಒಪ್ಪದೇ ಹೋದಲ್ಲಿ ಕಾನೂನು ಮೂಲಕವೇ ಹೋರಾಟ ನಡೆಸಲು ಶೃತಿ ನಿರ್ಧರಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಅಂತೂ ಇಂದು ನಡೆಯಲಿರುವ ಸಭೆ ತೀವ್ರ ಕುತೂಹಲ ಮೂಡಿಸಿದೆ.