ಈ ಘಟನೆಯಲ್ಲಿ ನನ್ನದೇನು ತಪ್ಪಿಲ್ಲ. ಇಡೇ ಚಿತ್ರದ ಪರಿಕಲ್ಪನೆ ಅದಾಗಿತ್ತು. ನಾನು ಇದುವರೆಗೂ ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ 270ಕ್ಕೂ ಚಿತ್ರಗಳಿಗೆ ಸ್ಟಂಟ್ ಮಾಡಿದ್ದೇನೆ. ಯಾವತ್ತೂ ಈ ರೀತಿ ಆಗಿರಲಿಲ್ಲ. ಮಾಸ್ತಿಗುಡಿ ದುರಂತ ನನ್ನ ಹಣೆಯಲ್ಲಿ ಬರೆದಿತ್ತು ಅನ್ನಿಸುತ್ತದೆ. ನಾನು ಈಗ ಏನು ಹೇಳಿದರೂ ಅದನ್ನು ಅರ್ಥ ಮಾಡಿಕೊಳ್ಳುವ ಸ್ಥಿತಿಯಲ್ಲಿ ಯಾರೂ ಇಲ್ಲ. ದೇವರು ಮತ್ತು ಶಿರಡಿ ಸಾಯಿಬಾಬಾ ಮೇಲೆ ಭಾರ ಹಾಕಿದ್ದೇನೆ ಅಷ್ಟೆ ಎಂದಿದ್ದಾರೆ.
ಅವರಿಗೆ ಈಜುಬರಲ್ಲ ಡ್ಯೂಪ್ ಬಳಸೋಣ ಎಂದಿದ್ದೆ. ಆದರೆ ಅವರ ಗುರು (ದುನಿಯಾ ವಿಜಯ್) ಈ ಸ್ಟಂಟ್ ಸ್ವತಃ ಮಾಡಬೇಕೆಂದು ಪಟ್ಟುಹಿಡಿದರು. ವಿಧಿಯಿಲ್ಲದೆ ಚಿತ್ರತಂಡ ಒಪ್ಪಿಕೊಂಡಿತ್ತು. ಕೆಳಗಡೆ ಎರಡು ಟ್ಯೂಬ್ ಹಾಕೋಣ ಎಂದು ಹೇಳಿದ್ದಕ್ಕೆ, ಅದರಿಂದ ಪೆಟ್ಟಾಗುತ್ತೆ ಅಂತೇಳಿ ಹೆಲಿಕಾಪ್ಟರ್ ಪೈಲಟ್ ಬೇಡ ಎಂದಿದ್ದರು.
ಎರಡು ಸೈಕಲ್ ಬೋಟ್‌ಗಳು, ಒಂದು ಮೋಟಾರು ಬೋಟು, ಐದು ತೆಪ್ಪಗಳಿದ್ದವು. ಇಷ್ಟೆಲ್ಲಾ ಮುನ್ನೆಚ್ಚರಿಕೆ ತೆಗೆದುಕೊಂಡರೂ ಕೇವಲ 100 ಮೀಟರ್ ಅಂತರದಲ್ಲಿದ್ದ ವಿಧಿಯನ್ನು ಗೆಲ್ಲಕ್ಕೆ ಆಗಲಿಲ್ಲ ಎಂದು ತಮ್ಮ ಮನದಾಳದ ಮಾತುಗಳನ್ನು ಹೊರಹಾಕಿದ್ದಾರೆ.