ಕೊರೋನಾದಿಂದ ಗುಣಮುಖರಾದ ಸುಮಲತಾ ಅಂಬರೀಶ್: ಫೋಟೋ ವೈರಲ್

ಗುರುವಾರ, 23 ಜುಲೈ 2020 (09:31 IST)
ಬೆಂಗಳೂರು: ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ತಾವು ಕೊರೋನಾದಿಂದ ಸಂಪೂರ್ಣವಾಗಿ ಗುಣಮುಖರಾಗಿರುವುದಾಗಿ ಹೇಳಿದ್ದಾರೆ. ಜತೆಗೆ ಸುಮಲತಾ ಮನೆಯಲ್ಲಿ ಮಾಸ್ಕ್ ಹಾಕಿಕೊಂಡು ನಡೆದಾಡುತ್ತಿರುವ ಫೋಟೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


ನನ್ನ ಕೊರೋನಾ ಪರೀಕ್ಷೆ ನೆಗೆಟಿವ್ ಬಂದಿದ್ದು, ರೋಗದಿಂದ ಮುಕ್ತನಾಗಿದ್ದೇನೆ ಎಂದು ತಿಳಿಸಲು ಸಂತೋಷಪಡುವೆ. ವೈದ್ಯರ ಸಲಹೆ ಮೇರೆಗೆ ಇನ್ನೂ ನಾಲ್ಕೈದು ವಾರ ಮನೆಯಲ್ಲೇ ವಿಶ್ರಾಂತಿ ಪಡೆಯುವೆ. ಯಾರೂ ಕೊರೋನಾಗೆ ಭಯಪಡಬೇಕಿಲ್ಲ. ಧೈರ್ಯದಿಂದ ಎದುರಿಸಿದರೆ ಈ ರೋಗದಿಂದ ಪಾರಾಗಬಹುದು ಎಂದು ಸುಮಲತಾ ಸಂದೇಶ ಬರೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ