‘ವಿಕ್ರಂ’ನಲ್ಲಿ ಸ್ಟಾರ್ ನಟ ಸೂರ್ಯ: ಸರ್ಪೈಸ್ ಕೊಟ್ಟ ಚಿತ್ರತಂಡ
ಈ ಸಿನಿಮಾದಲ್ಲಿ ಕಮಲ್ ಜೊತೆಗೆ ಪ್ರತಿಭಾವಂತ ನಟ ವಿಜಯ್ ಸೇತುಪತಿ, ಮಲಯಾಳಂ ನಟ ಫವಾದ್ ಫಾಸಿಲ್ ನಟಿಸಿರುವುದು ಎಲ್ಲರಿಗೂ ಗೊತ್ತಿತ್ತು. ಆದರೆ ಈಗ ರಿಲೀಸ್ ಗೆ ಕೆಲವೇ ಕ್ಷಣಗಳ ಮೊದಲು ಚಿತ್ರತಂಡ ಮತ್ತೊಬ್ಬ ಸ್ಟಾರ್ ನಟ ಸಿನಿಮಾದಲ್ಲಿರುವುದಾಗಿ ಪೋಸ್ಟರ್ ಪ್ರಕಟಿಸಿ ಸರ್ಪೈಸ್ ಕೊಟ್ಟಿದೆ.
ಸ್ಟಾರ್ ನಟ ಸೂರ್ಯ ಕೂಡಾ ವಿಕ್ರಂನಲ್ಲಿ ವಿಶೇಷ ಪಾತ್ರ ಮಾಡಿದ್ದಾರೆ. ಅವರ ಪೋಸ್ಟರ್ ಗಳು ಈಗ ವೈರಲ್ ಆಗಿವೆ. ಹೀಗಾಗಿ ವಿಕ್ರಂ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗಿದೆ.