ರಾಜಕೀಯಕ್ಕಾಗಿ ಪಾದಯಾತ್ರೆ ಮಾಡಲಿದ್ದಾರಂತೆ ದಳಪತಿ ವಿಜಯ್
ರಾಜಕೀಯ ಪಕ್ಷ ಸೇರುತ್ತಾರೋ ಅಥವಾ ತಾವೇ ಹೊಸ ಪಕ್ಷ ಕಟ್ಟುತ್ತಾರೋ ಎಂಬುದು ಗೊತ್ತಾಗಿಲ್ಲ. ಆದರೆ ಇತ್ತೀಚೆಗೆ ವಿಜಯ್ ಮಕ್ಕಳ್ ಐಕ್ಯಂ ಪಕ್ಷದ ನಾಯಕರನ್ನು ಭೇಟಿಯಾಗಿರುವುದು ಅವರು ಆ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿ ದಟ್ಟವಾಗಿದೆ.
ಇದೀಗ ತಮ್ಮ ರಾಜಕೀಯ ಜೀವನ ಆರಂಭಕ್ಕೆ ಮೊದಲು ಇಡೀ ರಾಜ್ಯದಲ್ಲಿ ಪಾದಯಾತ್ರೆ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಪಾದಯಾತ್ರೆ ಮೂಲಕ ಜನರ ನಾಡಿಮಿಡಿತ ಅರಿತು ಬಳಿಕ ಅಧಿಕೃತವಾಗಿ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂಬ ಸುದ್ದಿಯಿದೆ.