ಹನಿಮೂನಿನಲ್ಲೇ ಪತ್ನಿಗೆ ವಿಚಿತ್ರ ಶಾಕ್ ಕೊಟ್ಟ ಪತಿ

ಶನಿವಾರ, 3 ಅಕ್ಟೋಬರ್ 2020 (12:53 IST)
ಪತಿ ಮಹಾಶಯನೊಬ್ಬ ಮಧುಚಂದ್ರಕ್ಕೆ ಸಿದ್ಧವಾಗಿದ್ದ ಪತ್ನಿಗೆ ಮೊದಲ ರಾತ್ರಿಯಲ್ಲೇ ಬಿಗ್ ಶಾಕ್ ಕೊಟ್ಟ ಘಟನೆ ನಡೆದಿದೆ.

ಕೊತ್ವಾಲಿ ಮೂಲದ ಯುವತಿ ಹತ್ರಾಸ್ ಮೂಲದ ವೈದ್ಯನೊಂದಿಗೆ ಮದುವೆಯಾಗಿದ್ದಳು.

ಹನಿಮೂನ್ ಗೆ ಹೋಗಿದ್ದಾಗ ತಾನು ಸಲಿಂಗಕಾಮಿ, ದೊಡ್ಡ ರೋಗ ಇದೆ ಎಂದು ಪತ್ನಿಗೆ ಹೇಳಿದ್ದಾನೆ. ಅಲ್ಲದೇ ಇದನ್ನು ಯಾರಿಗೂ ಹೇಳದಂತೆ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಹನಿಮೂನ್ ನಲ್ಲಿ ನಡೆದ ಘಟನೆಯಿಂದ ವಿಚಲಿತರಾದ ಪತ್ನಿ ತವರು ಮನೆ ಸೇರಿಕೊಂಡಿದ್ದಳು.

ಆ ಬಳಿಕ ವರದಕ್ಷಿಣೆ ತರುವಂತೆ ಗಂಡನ ಮನೆಯವರು ಕಾಟ ಕೊಡಲು ಶುರುಮಾಡಿದ್ದರೆಂದು ಪತ್ನಿ ದೂರು ದಾಖಲು ಮಾಡಿದ್ದಾಳೆ.


ಉತ್ತರ ಪ್ರದೇಶದಲ್ಲಿ ಆಗ್ರಾದಲ್ಲಿ ಈ ಘಟನೆ ನಡೆದಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ