ಚೆನ್ನೈ : ಕಾಲಿವುಡ್ ಸ್ಟಾರ್ ದಂಪತಿಗಳಾದ ಸೂರ್ಯ ಹಾಗೂ ಜ್ಯೋತಿಕಾ ಜೊತೆಯಾಗಿ ನಟಿಸಿ ಪ್ರೀತಿಸಿ ಮದುವೆಯಾದರು. ಈ ದಂಪರಿಗೆ ಇಬ್ಬರು ಮಕ್ಕಳಿದ್ದಾರೆ. ಇದೀಗ ಅವರಿಬ್ಬರು ಮತ್ತೆ ಜೊತೆಯಾಗಿ ಚಿತ್ರದಲ್ಲಿ ನಟಿಸಲು ಹೊರಟಿದ್ದಾರೆ ಎನ್ನಲಾಗಿದೆ.
ಇತ್ತೀಚಿನ ಮಾಹಿತಿ ಪ್ರಕಾರ ಸೂರ್ಯ, ಜ್ಯೋತಿಕಾ ಅವರು ಹಲಿತಾ ಶಮೀಮ್ ನಿರ್ದೇಶನದ ಆರೆಂಜ್ ಕ್ಯಾಂಡಿ ಎಂಬ ಚಿತ್ರ ಮಾಡುತ್ತಿದ್ದಾರೆ ಎಂಬ ವದಂತಿ ಇದೆ. ಆರೆಂಜ್ ಕ್ಯಾಂಡಿ ತಮಿಳು ಚಿತ್ರ ಸಿಲ್ಲು ಕರುಪಟ್ಟಿ ಚಿತ್ರದ ತೆಲುಗು ಡಬ್ಬಿಂಗ್ ಆಗಿದೆ. ಈ ಚಿತ್ರದಲ್ಲಿ ನಟ ಸೂರ್ಯ ತಮ್ಮ ಪತ್ನಿ ಜ್ಯೋತಿಕಾ ಅವರಿಗೂ ಅವಕಾಶ ನೀಡುವಂತೆ ಕೇಳಿದ್ದಾರೆ ಎಂದು ಇತ್ತೀಚಿನ ಸಂದರ್ಶನವೊಂದರಲ್ಲಿ ಹಲಿತಾ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.