ತೆಲುಗು ಚಿತ್ರರಂಗದಲ್ಲಿಯೂ ಡ್ರಗ್ಸ್ ಬಗ್ಗೆ ತನಿಖೆ ಮಾಡಬೇಕು ಎಂದು ಒತ್ತಾಯಿಸಿದ ಟಾಲಿವುಡ್ ನಟಿ

ಮಂಗಳವಾರ, 15 ಸೆಪ್ಟಂಬರ್ 2020 (12:12 IST)
ಹೈದರಾಬಾದ್ : ಟಾಲಿವುಡ್ ನಲ್ಲಿಯೂ ಡ್ರಗ್ಸ್ ದಂಧೆ ಪ್ರಕರಣದ ಬಗ್ಗೆ ಸಖತ್ ಸೌಂಡ್ ಕೇಳಿಬರುತ್ತಿದ್ದು, ತೆಲುಗು ನಟಿಯೊಬ್ಬಳು ತೆಲುಗು ಚಿತ್ರರಂಗದಲ್ಲಿ ಡ್ರಗ್ಸ್ ಬಗ್ಗೆ ತನಿಖೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಹೌದು. ತೆಲುಗು ನಟಿ ಮಾಧವಿ ಲತಾ ಟಾಲಿವುಡ್ ಸಿನಿಮಾ ರಂಗದ ಬಗ್ಗೆ ಮಾತನಾಡಿದ್ದು, ತೆಲುಗು ಸಿನಿಮಾ ರಂಗದಲ್ಲಿ ಡ್ರಗ್ಸ್ ಪಾರ್ಟಿಗಳು ಬಹಳ ಸಾಮಾನ್ಯವಂತೆ. ಲಾಕ್ ಡೌನ್ ಸಮಯದಲ್ಲಿ ಸಹ ಚಿತ್ರರಂಗದ ಹಲವರು ಡ್ರಗ್ಸ್ ಪಾರ್ಟಿಗಳನ್ನು  ಭಾಗವಹಿಸಿದ್ದರು. ಎನ್ ಸಿಬಿ ಅಧಿಕಾರಿಗಳು ತೆಲುಗು ಚಿತ್ರರಂಗವನ್ನು ಸಹ ತನಿಖೆಗೆ ಒಳಪಡಿಸಬೇಕು. ಹಲವು ನಟ ನಟಿಯರು ಡ್ರಗ್ಸ್ ಸೇವಿಸುವುದನ್ನು ನಾನು ನೋಡಿದ್ದೇನೆ ಎಂದು ಹೇಳಿಕೆ ನೀಡಿದ್ದು, ಇದು ಈಗ ಟಾಲಿವುಟ್ ನಲ್ಲಿ ಆತಂಕ ಮೂಇಸಿದೆ ಎನ್ನಲಾಗಿದೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ