ಬಿಗ್ ಸ್ಟಾರ್ ಗಳಿಗೆ ನಿರಾಸೆ ತಂದ ಅನ್ ಲಾಕ್ 3.0

ಸೋಮವಾರ, 5 ಜುಲೈ 2021 (11:36 IST)
ಬೆಂಗಳೂರು: ಬಿಡುಗಡೆಗೆ ಕಾದಿರುವ ಸ್ಯಾಂಡಲ್ ವುಡ್ ನ ಸ್ಟಾರ್ ಸಿನಿಮಾಗಳಿಗೆ ಅನ್ ಲಾಕ್ 3.0 ನಿಯಮಗಳು ನಿರಾಸೆ ತಂದಿದೆ.


ಅನ್ ಲಾಕ್ 3.0 ರಲ್ಲಿ ಥಿಯೇಟರ್ ತೆರೆಯಲು ಅನುಮತಿ ಸಿಗಬಹುದು. ಶೇ.50 ಪ್ರೇಕ್ಷಕರಿಗಾದರೂ ಅವಕಾಶ ನೀಡಬಹುದು ಎಂದು ಚಿತ್ರರಂಗ ಕಾಯುತ್ತಿತ್ತು. ಈಗಾಗಲೇ ಮುಖ್ಯಮಂತ್ರಿಗಳಿಗೂ ಮನವಿ ಸಲ್ಲಿಸಲಾಗಿತ್ತು. ಆದರೆ ರಾಜ್ಯ ಸರ್ಕಾರ ಥಿಯೇಟರ್ ತೆರೆಯಲು ಅನುಮತಿ ನೀಡಿಲ್ಲ.

ಹೀಗಾಗಿ ಬಿಡುಗಡೆಗೆ ಕಾದಿರುವ ಬಿಗ್ ಸ್ಟಾರ್ ಸಿನಿಮಾಗಳಿಗೆ ನಿರಾಸೆ ಕಾದಿದೆ. ವರ್ಷದ ಹಿಂದೆಯೇ ಬಿಡುಗಡೆಯಾಗಬೇಕಿದ್ದ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ 3,  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2, ಶಿವರಾಜ್ ಕುಮಾರ್ ಅಭಿನಯದ ಭಜರಂಗಿ 2, ದುನಿಯಾ ವಿಜಯ್ ನಿರ್ದೇಶಿಸಿ, ಅಭಿನಯಿಸಿದ ಸಲಗ ಬಿಡುಗಡೆಗೆ ಕಾದಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಥಿಯೇಟರ್ ತೆರೆಯದೇ ಇರುವುದರಿಂದ ಈ ಸಿನಿಮಾಗಳು ವರ್ಷಾಂತ್ಯಕ್ಕೆ ಮುಂದೂಡಿಕೆಯಾಗಬಹುದು. ಇದರಿಂದ ಈ ಸ್ಟಾರ್ ಗಳ ಬೇರೆ ಸಿನಿಮಾ ಬಿಡುಗಡೆಗೂ ತೊಂದರೆಯಾಗಲಿದೆ. ಸ್ಟಾರ್ ಸಿನಿಮಾಗಳು ಬಿಡುಗಡೆಯಾಗದೇ ಚಿತ್ರರಂಗ ಸಂಕಷ್ಟದಿಂದ ಮೇಲೇಳದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ