ನಿರ್ದೇಶನದ ಬಗ್ಗೆ ಬಿಗ್ ಅಪ್ ಡೇಟ್ ಕೊಟ್ಟ ರಿಯಲ್ ಸ್ಟಾರ್ ಉಪೇಂದ್ರ
ತಮ್ಮ ನಿರ್ದೇಶನದ ಸಿನಿಮಾ ಸ್ಕ್ರಿಪ್ಟ್ ಕೆಲಸಗಳಲ್ಲಿ ತೊಡಗಿಸಿಕೊಂಡಿರುವುದಾಗಿ ಉಪೇಂದ್ರ ಅಭಿಮಾನಿಗಳಿಗೆ ಹೇಳಿದ್ದಾರೆ. ಹಾಗಾಗಿ ಸದ್ಯದಲ್ಲೇ ಸಿನಿಮಾ ಅನೌನ್ಸ್ ಆಗುವುದು ಗ್ಯಾರಂಟಿ ಎಂದಾಗಿದೆ.
ಲಾಕ್ ಡೌನ್, ಕೊರೋನಾ ಹಾವಳಿ ಮುಗಿಯುವರೆಗೂ ನನ್ನ ನಿರ್ದೇಶನದ ಸಿನಿಮಾ ಆರಂಭಿಸಲ್ಲ ಎಂದು ಉಪೇಂದ್ರ ಈ ಮೊದಲು ಹೇಳಿದ್ದರು. ಇದೀಗ ಚಿತ್ರರಂಗ ಸಂಪೂರ್ಣ ತೆರೆಯಲು ಅವಕಾಶ ಸಿಕ್ಕಿದ್ದು, ಚಿತ್ರರಂಗ ಸಹಜ ಸ್ಥಿತಿಗೆ ಬರುತ್ತಿದೆ. ಇದರ ನಡುವೆ ಉಪೇಂದ್ರ ಕಡೆಯಿಂದ ಸಿಹಿ ಸುದ್ದಿ ಬಂದಿದೆ.