ರಶ್ಮಿಕಾ, ವಿಜಯ್ ದೇವರಕೊಂಡ ಮದುವೆ ಯಾವ ಸ್ಟೈಲ್ ನಲ್ಲಿ ನಡೆಯಲಿದೆ

Krishnaveni K

ಬುಧವಾರ, 25 ಫೆಬ್ರವರಿ 2026 (10:56 IST)
Photo Credit: X
ಉದಯಪುರ: ಟಾಲಿವುಡ್ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇವರ ಮದುವೆ ಯಾವ ಪದ್ಧತಿಯಲ್ಲಿ ನಡೆಯಲಿದೆ ಇಲ್ಲಿದೆ ವಿವರ.

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮೊನ್ನೆಯಷ್ಟೇ ತಮ್ಮ ಮದುವೆ ವಿಚಾರವನ್ನು ಅಧಿಕೃತಗೊಳಿಸಿದ್ದಾರೆ. ಇವರ ಮದುವೆ ಉದರಪುರದ ಹಿಲ್ ಟಾಪ್ ಎಸ್ಟೇಟ್ ನಲ್ಲಿ ನಡೆಯಲಿದೆ. ಇಲ್ಲಿಗೆ ಸಾರ್ವಜನಿಕರು, ಪಪ್ಪಾರಾಜಿಗಳು ಯಾರೂ ಸುಳಿಯಲೂ ಸಾಧ್ಯವಿಲ್ಲ.

ತಮ್ಮ ಮದುವೆ ಫೋಟೋಗಳು ಎಲ್ಲೂ ಲೀಕ್ ಆಗದಂತೆ ವಿಜಯ್-ರಶ್ಮಿಕಾ ಸೂಕ್ತ ಭದ್ರತೆ ಮಾಡಿಕೊಂಡಿದ್ದಾರೆ. ಹಾಗಿದ್ದರೂ ಫ್ಯಾನ್ಸ್ ಗೆ ಇವರ ಮದುವೆ ಹೇಗೆ ನಡೆಯಬಹುದು ಎಂಬ ಕುತೂಹಲ ಇದ್ದೇ ಇದೆ.

ಮೂಲಗಳ ಪ್ರಕಾರ ಫೆಬ್ರವರಿ 26 ರಂದು 10 ಗಂಟೆ ಸುಮಾರಿಗೆ ಮದುವೆ ಕಾರ್ಯಕ್ರಮಗಳು ನಡೆಯಲಿದೆ. ವಿಜಯ್ ದೇವರಕೊಂಡ ಪಕ್ಕಾ ಹೈದರಾಬಾದ್ ನವರಾಗಿದ್ದು, ರಶ್ಮಿಕಾ ಕರ್ನಾಟಕದ ಕೊಡಗಿನವರು. ಹೀಗಾಗಿ ಇವರ ಮದುವೆಯಲ್ಲಿ ಎರಡೂ ಕಡೆಯ ಸಂಪ್ರದಾಯವಿರಲಿದೆ. ಮೊದಲು ತೆಲುಗು ಸ್ಟೈಲ್ ನಲ್ಲಿ ಮದುವೆ ಕಾರ್ಯಕ್ರಮಗಳು ನಡೆಯಲಿದ್ದು ಅದಾದ ಬಳಿಕ ಕೊಡವ ಸ್ಟೈಲ್ ನ ಸಂಪ್ರದಾಯವನ್ನೂ ಆಚರಿಸಲಾಗುತ್ತದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ