ಅಪಪ್ರಚಾರ, ಪೈರಸಿ ಕಾಟದ ನಡುವೆ ವಿಕ್ರಾಂತ್ ರೋಣ ಗಳಿಕೆಗೆ ಪೆಟ್ಟು

ಸೋಮವಾರ, 1 ಆಗಸ್ಟ್ 2022 (08:20 IST)
ಬೆಂಗಳೂರು: ಒಂದೆಡೆ ಅಪಪ್ರಚಾರದ ಹೊಡೆತ ಮತ್ತೊಂದೆಡೆ ಪೈರಸಿ ಕಾಟ. ಇದರಿಂದಾಗಿ ಮೊನ್ನೆಯಷ್ಟೇ ಬಿಡುಗಡೆಯಾಗಿರುವ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಗಳಿಕೆಗೆ ಪೆಟ್ಟು ಬಿದ್ದಿದೆ.

ವಿಕ್ರಾಂತ್ ರೋಣ ಸಿನಿಮಾ ಮೊದಲ ದಿನ ಭರ್ಜರಿ ಗಳಿಕೆ ಮಾಡಿತ್ತು. ಆದರೆ ಅದಾದ ಬಳಿಕ ಚಿತ್ರ ರಂಗಿತರಂಗ ಸಿನಿಮಾವನ್ನೇ ಹೋಲುತ್ತಿದೆ ಎಂದು ಅಪಪ್ರಚಾರ ಎಬ್ಬಿಸಲಾಯಿತು. ಇದರ ಜೊತೆಗೆ ಬಿಡುಗಡೆಯಾದ ಮೊದಲ ದಿನವೇ ಚಿತ್ರ ಆನ್ ಲೈನ್ ನಲ್ಲಿ ಸೋರಿಕೆಯಾಗಿತ್ತು.

ಇದರಿಂದಾಗಿ ಮೂರನೇ ದಿನಕ್ಕೆ ಕಲೆಕ್ಷನ್ ಡಲ್ ಹೊಡೆಯಿತು. ಇದು ನಿರ್ಮಾಪಕರ ಚಿಂತೆಗೆ ಕಾರಣವಾಗಿದೆ. ದಯವಿಟ್ಟು ಚಿತ್ರ ನೋಡದೇ ಅಪಪ್ರಚಾರ ಮಾಡಬೇಡಿ, ಇದರಿಂದ ನಿರ್ಮಾಪಕರಿಗೆ ನಷ್ಟವಾಗುತ್ತಿದೆ ಎಂದು ನಿರ್ಮಾಪಕ ಜ್ಯಾಕ್ ಮಂಜು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ