ಶಿವರಾಜ್ ಕುಮಾರ್ ಅವರು ತಮ್ಮ ಅಭಿಮಾನಿಗಳಿಗೆ ಮತದಾನದ ಬಗ್ಗೆ ನೀಡಿದ ಸಲಹೆ ಏನು?

ಮಂಗಳವಾರ, 20 ಮಾರ್ಚ್ 2018 (06:33 IST)
ತುಮಕೂರು : ಕರ್ನಾಟಕದ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರು ತಮ್ಮ ಅಭಿಮಾನಿಗಳಿಗೆ ಸಲಹೆಯೊಂದನ್ನು ಕೊಟ್ಟಿದ್ದಾರೆ.


ಸಿದ್ದಗಂಗಾ ಮಠ ಆಧರಿಸಿದ ಭೂಸ್ವರ್ಗ ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿದ ಶಿವರಾಜ್ ಕುಮಾರ್ ಅವರು ತಮ್ಮ ಅಭಿಮಾನಿಗಳನ್ನುದ್ದೇಶಿಸಿ ಮಾತನಾಡಿ,’ ಜಾತಿ ನೋಡಿ ಮತ ಹಾಕಬೇಡಿ, ಜಾತಿ ನೋಡಿ ಮರ್ಯಾದೆ ಕೊಡಬೇಡಿ. ಸಿದ್ದಗಂಗಾ ಮಠಕ್ಕೆ ಏನೋ ಒಂದು ಪವರ್ ಇದೆ. ಮಠದ ಮಹಿಮೆಯೋ ಏನೋ ಎಲ್ಲಾ ಜಾತಿಗಳನ್ನು ಒಗ್ಗೂಡಿಸುತ್ತದೆ. ಮಠದಲ್ಲಿ ಜಾತಿ ಬೇಧ ಭಾವ ಇಲ್ಲಾ. ಅಂತಹ ಮಹಾನ್ ಮಠ ಹಾಕಿಕೊಟ್ಟ ಹಾದಿಯಲ್ಲಿ ನಾವು ಸಾಗಬೇಕು. ಹಾಗಾಗಿ ಜಾತಿ ನೋಡಿ ಮತ ಹಾಕಬೇಡಿ. ಒಳ್ಳೆ ಮನುಷ್ಯನಿಗೆ, ಒಳ್ಳೆ ಕೆಲಸ ಮಾಡೋರಿಗೆ ವೋಟ್ ಹಾಕಿ’ ಎಂದು ಸಲಹೆ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ