ನಟ ಗಣೇಶ್ ಮೋಕ್ಷ ಅಗರಬತ್ತಿ ಸಂಸ್ಥೆಯ ಮೇಲೆ ಕೇಸ್ ದಾಖಲಿಸಿದ್ದು ಯಾಕೆ…?
ಮಂಗಳವಾರ, 3 ಏಪ್ರಿಲ್ 2018 (07:49 IST)
ಬೆಂಗಳೂರು : ಸ್ಯಾಂಡಲ್ ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ಅನುಮತಿ ಇಲ್ಲದೆ ತಮ್ಮ ಫೋಟೋವನ್ನು ಮೋಕ್ಷ ಅಗರಬತ್ತಿ ಕಂಪೆನಿಯವರು ಬಳಸಿಕೊಂಡಿದ್ದ ಕಾರಣ ಅಗರಬತ್ತಿ ಸಂಸ್ಥೆಯ ಮೇಲೆ 75 ಲಕ್ಷ ಪರಿಹಾರ ನೀಡುವಂತೆ ಕೇಸು ದಾಖಲಿಸಿರುವ ಹಿನ್ನಲೆಯಲ್ಲಿ ಸೋಮವಾರ ಈ ಕೇಸ್ ಬಗ್ಗೆ ವಿಚಾರಣೆ ನಡೆಸಿದ ಸಿಟಿಸಿವಿಲ್ ನ್ಯಾಯಾಲಯ ಅಂತಿಮ ತೀರ್ಪನ್ನು ಹೊರಹಾಕಿದೆ.
2008 ರಲ್ಲಿ ಚೆಲುವಿನ ಚಿತ್ತಾರ ಚಿತ್ರದ ಪ್ರಚಾರಕ್ಕಾಗಿ ಎಸ್. ನಾರಾಯಣ್ ಅವರು ಮೋಕ್ಷ ಅಗರಬತ್ತಿ ಕಂಪೆನಿಯೊಂದಿಗೆ 3 ತಿಂಗಳ ಅವಧಿಗೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಈ ಕಂಪೆನಿಯವರು ಅವಧಿ ಮುಗಿದರೂ ಕೂಡ ಗಣೇಶ್ ಅವರ ಅನುಮತಿ ಇಲ್ಲದೆ ಅವರ ಫೋಟೋವನ್ನುಬಳಸಿಕೊಂಡಿದ್ದರು. ಆದ ಕಾರಣ ಗಣೇಶ್ ಅವರು ಈ ಬಗ್ಗೆ ಅಗರಬತ್ತಿ ಸಂಸ್ಥೆಯ ಮೇಲೆ ಕೇಸು ದಾಖಲಿಸಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪು ಸೋಮವಾರ ಪ್ರಕಟವಾಗಿದ್ದು, ಇದರ ಪ್ರಕಾರ ಗಣೇಶ್ ಅವರಿಗೆ 75 ಲಕ್ಷ ಪರಿಹಾರ ನೀಡುವಂತೆ ಮೋಕ್ಷ್ ಅಗರಬತ್ತಿ ಕಂಪನಿಗೆ ಸಿವಿಲ್ ಕೋರ್ಟ್ ಆದೇಶ ನೀಡಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ