ಖಳನಟ ವಜ್ರಮುನಿ ಕುಟುಂಬ ಪೊಲೀಸ್​ ಠಾಣೆ ಮೆಟ್ಟಿಲೇರಿದ್ಯಾಕೆ?

ಶನಿವಾರ, 14 ಜುಲೈ 2018 (07:29 IST)
ಬೆಂಗಳೂರು : ಕನ್ನಡ ಚಿತ್ರರಂಗದ ಖಾತ್ಯ ಖಳನಟ ವಜ್ರಮುನಿ ಅವರ ಕುಟುಂಬದವರು ಚಿತ್ರತಂಡವೊಂದರ ವಿರುದ್ಧ ಪೊಲೀಸ್​ ಠಾಣೆಯಲ್ಲಿ  ದೂರು ನೀಡಿದ್ದಾರೆ.


ಸಂಪತ್​ ಎನ್ನುವವರು ತಮ್ಮ ಚಿತ್ರಕ್ಕೆ 'ವಜ್ರಮುನಿ' ಎಂದು ಹೆಸರಿಟ್ಟಿದ್ದರು. ಆದರೆ ಚಿತ್ರಕ್ಕೆ ಟೈಟಲ್ ಇಡುವಾಗ ವಜ್ರಮುನಿ ಕುಟುಂಬದವರ  ಅನುಮತಿ ಪಡೆಯದೆ ಇದ್ದದ್ದುಈ ವಿವಾದಕ್ಕೆ ಕಾರಣವಾಗಿದೆ.


ತಮ್ಮ ಅನುಮತಿ ಪಡೆಯದೇ ಚಿತ್ರಕ್ಕೆ 'ವಜ್ರಮುನಿ' ಎಂದು ಹೆಸರಿಟ್ಟಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ವಜ್ರಮುನಿ ಪತ್ನಿ ಲಕ್ಷ್ಮಿ ದೇವಿ ಹಾಗುಅವರ ಪುತ್ರ ಜಗದೀಶ್​​ ಚಲನ ಚಿತ್ರ ವಾಣಿಜ್ಯ ಮಂಡಳಿ ಹಾಗೂ ಬೆಂಗಳೂರು ಪೊಲೀಸ್​ ಆಯಕ್ತರಿಗೆ ದೂರುಕೊಟ್ಟಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ