ವಿಷ್ಣುವರ್ಧನ್ ಹೊಸ ಮನೆಯಲ್ಲಿ ಕೃಷ್ಣನ ಗುಡಿಯಿದೆ ಯಾಕೆ?
ಹೊಸ ವಿನ್ಯಾಸದೊಂದಿಗೆ ವಿಷ್ಣು ಕನಸಿನ ಮನೆ ನೋಡಿ ಅಭಿಮಾನಿಗಳೂ ಖುಷಿಯಾಗಿದ್ದಾರೆ. ಈ ಮನೆಗೆ ವಲ್ಮೀಕ ಎಂದು ಹೆಸರಿಡಲಾಗಿದೆ. ಮನೆಯ ಆವರಣದಲ್ಲೇ ಕೃಷ್ಣನಿಗೆ ಪುಟ್ಟದಾದ ಗುಡಿಯಿದೆ. ಇದಕ್ಕೆ ಕಾರಣವೇನೆಂದು ವಿಷ್ಣು ದಾದ ಪುತ್ರಿ ಕೀರ್ತಿ ವಿಷ್ಣುವರ್ಧನ್ ವಿವರಿಸಿದ್ದಾರೆ.
ತಂದೆಗೆ ಕೃಷ್ಣನೆಂದರೆ ಭಾರೀ ಪ್ರೀತಿ. ಈ ಕಾರಣಕ್ಕೆ ಮನೆಯ ಆವರಣದಲ್ಲಿ ಕೃಷ್ಣನ ಗುಡಿ ನಿರ್ಮಿಸಲಾಗಿದೆ ಎಂದು ಕೀರ್ತಿ ವಿಷ್ಣುವರ್ಧನ್ ತಿಳಿಸಿದ್ದಾರೆ.