ಮಕ್ಕಳಿಗಾಗಿ ಒಂದಾಗಲಿದ್ದಾರಾ ಧನುಷ್, ಐಶ್ವರ್ಯಾ ಜೋಡಿ?

ಗುರುವಾರ, 6 ಅಕ್ಟೋಬರ್ 2022 (08:10 IST)
ಚೆನ್ನೈ: ಇತ್ತೀಚೆಗಷ್ಟೇ ದಾಂಪತ್ಯ ಜೀವನ ಮುರಿದುಕೊಂಡಿದ್ದ ಟಾಲಿವುಡ್ ಜೋಡಿ ಧನುಷ್, ಐಶ್ವರ್ಯಾ ರಜನೀಕಾಂತ್ ಈಗ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವ ತೀರ್ಮಾನ ಮಾಡಿದ್ದಾರೆಯೇ?

ಇಂತಹದ್ದೊಂದು ಸುದ್ದಿ ಹರಿದಾಡುತ್ತಿದೆ. ಧನುಷ್, ಐಶ್ವರ್ಯಾಗೆ ಲಿಂಗ ಮತ್ತು ಯಾತ್ರ ಎನ್ನುವ ಇಬ್ಬರು ಪುತ್ರರಿದ್ದಾರೆ. ಈ ಮಕ್ಕಳಿಗಾಗಿ ಧನುಷ್, ಐಶ್ವರ್ಯಾ ಜೊತೆಯಾಗಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

ಕೆಲವು ದಿನಗಳ ಹಿಂದೆ ಮಕ್ಕಳ ಶಾಲಾ ಕಾರ್ಯಕ್ರಮದಲ್ಲಿ ಇಬ್ಬರೂ ಜೊತೆಯಾಗಿ ಭಾಗಿಯಾಗಿದ್ದರು. ಈಗ ಎರಡೂ ಕುಟುಂಬಸ್ಥರು ಈ ಜೋಡಿಯನ್ನು ಒಂದು ಮಾಡಲು ಪ್ರಯತ್ ನಡೆಸಿದ್ದು, ಆ ಪ್ರಯತ್ನ ಫಲವಾಗಿ ಇಬ್ಬರೂ ಒಂದಾಗಲು ತೀರ್ಮಾನಿಸಿದ್ದಾರೆ ಎಂಬ ಸುದ್ದಿಯಿದೆ.
-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ