ಕನ್ನಡಕ್ಕೆ ಬರ್ತಾರಾ ಕತ್ರಿನಾ ಕೈಫ್? ಕಿಚ್ಚ ಸುದೀಪ್ ಜತೆ ಡ್ಯಾನ್ಸ್ ಮಾಡೋರು ಯಾರು?

ಸೋಮವಾರ, 30 ನವೆಂಬರ್ 2020 (10:24 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಫ್ಯಾಂಟಮ್ ಸಿನಿಮಾ ಈಗ ಭಾರೀ ಸದ್ದು ಮಾಡುತ್ತಿದೆ. ಈ ಸಿನಿಮಾದ ಹಾಡೊಂದಕ್ಕೆ ಈಗ ಬಾಲಿವುಡ್ ಸ್ಟಾರ್ ನಟಿಯನ್ನು ಕರೆತರಲು ಚಿತ್ರತಂಡ ತಯಾರಿ ನಡೆಸಿದೆ.


ಸುದೀಪ್ ಜತೆ ಹಾಡೊಂದಕ್ಕೆ ಹೆಜ್ಜೆ ಹಾಕಲು ಬಾಲಿವುಡ್ ನ ಸ್ಟಾರ್ ನಟಿ ಕತ್ರಿನಾ ಕೈಫ್ ಅಥವಾ ನೋರಾ ಫತೇಹ್ ರನ್ನು ಕರೆಸಿಕೊಳ್ಳಲು ಚಿತ್ರತಂಡ ಪ್ಲ್ಯಾನ್ ಮಾಡಿದ್ದು, ಈ ವಿಚಾರವಾಗಿ ನಟಿಯರನ್ನು ಈಗಾಗಲೇ ಸಂಪರ್ಕಿಸಿದೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. ಆದರೆ ನಟಿಯರ ಕಡೆಯಿಂದ ಯಾವ ಉತ್ತರ ಬಂದಿದೆ ಎನ್ನುವುದು ತಿಳಿದುಬಂದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ