ಈ ಚಿತ್ರದಲ್ಲಿ ಬರುವ ಮುಖ್ಯವಾದ ದೃಶ್ಯವೊಂದಕ್ಕೆ ಕೆಂಗೇರಿ ಸಮೀಪದ ಕುಂಬಳಗೋಡಿನಲ್ಲಿ ಅದ್ಧೂರಿಯಾದ ಸೆಟ್ ಹಾಕಲಾಗಿತ್ತು. ಈ ಸೆಟ್ ನೋಡಿದರೆ ಸಾಕ್ಷಾತ್ತು ಯಮಲೋಕವೇ ಭೂಲೋಕಕ್ಕಿಳಿದ ಫೀಲ್ ಬರುವಂತಿದೆಯಂತೆ. ವಿಶೇಷವೆಂದರೆ ಈ ಸೆಟ್‍ನಲ್ಲಿ ಈ ಚಿತ್ರದ ನಾಯತಕ ಶಿಶಿರ್ ಚಿತ್ರಗುಪ್ತನಾಗಿ ಹಾಗೂ ಚಿಕ್ಕಣ್ಣ ಯಮನಾಗಿ ಅಭಿನಯಿಸಿರುವ ದೃಷ್ಯಾವಳಿಗಳನ್ನು ಚಿತ್ರೀಕರಣ ಮಾಡಿಕೊಳ್ಳಲಾಗಿದೆ.
ಅಂದಹಾಗೆ ಬಿಲ್‍ಗೇಟ್ಸ್ ರೀತಿ ಸಾಧನೆ ಮಾಡಬೇಕೆಂದು ಪುಟ್ಟ ಹಳ್ಳಿಯಿಂದ ಪಟ್ಟಣಕ್ಕೆ ಬರುವ ಹುಡುಗರ ಕಥೆ ಇದು. ಅವರಿಗೆ ಬಿಲ್‍ಗೇಟ್ಸ್ ಸ್ಫೂರ್ತಿಯಷ್ಟೆ. ಇಬ್ಬರು ನಾಯಕರು ತಮ್ಮ ಆಸೆಯನ್ನು ಪೂರೈಸಿಕೊಳ್ಳುತ್ತಾರೋ ಇಲ್ಲವೋ ಎಂಬುದು ಕಥೆಯ ಸಾರಾಂಶ. ಇದುವರೆಗೂ ಸಂಕಲನಕಾರನಾಗಿ, ಸಹಾಯಕ ಸಹ ನಿರ್ದೇಶಕನಾಗಿ ಎಂಟು ವರ್ಷಗಳ ಕಾಲ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಸಿ. ಶ್ರೀನಿವಾಸ್ ಈ ಚಿತ್ರದ ಮೂಲಕ ಸ್ವತಂತ್ರವಾಗಿ ನಿರ್ದೇಶನಕ್ಕಿಳಿದಿದ್ದಾರೆ.
ಸೊಸೆ, ಕುಲವಧು ಧಾರಾವಾಹಿಗಳಿಂದ ಪರಿಚಿತರಾದ ಶಿಶಿರ ಶಾಸ್ತ್ರಿ ಚಿತ್ರದ ನಾಯಕ. ಶಿಶಿರ ಜೊತೆ ಚಿಕ್ಕಣ್ಣ ಮುಖ್ಯ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರೋಜಾ ಮತ್ತು ಅಕ್ಷರಾ ನಾಯಕಿಯರು. ರೋಜಾಗೆ ಇದು ನಾಲ್ಕನೇ ಚಿತ್ರವಾದರೆ ಮೇಘನಾಗೆ ಮೂರನೇ ಚಿತ್ರ. ಇನ್ನುಳಿದಂತೆ ನೋಬಿನ್ ಪಾಲ್ ಸಂಗೀತದಲ್ಲಿ ನಾಲ್ಕು ಹಾಡುಗಳಿವೆ. ರಾಕೇಶ್ ಸಿ. ತಿಲಕ್ ಛಾಯಾಗ್ರಹಣ, ಜಯ ಮಲ್ಲಿಕಾರ್ಜುನ ಸಂಭಾಷಣೆ ಈ ಚಿತ್ರಕ್ಕಿದೆ. ಸಂಕಲನ ಮರಿಸ್ವಾಮಿ ಪಿ ಅವರದ್ದು.