ಬೆಂಗಳೂರು: ಕೊರೋನಾ, ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೀಡಾದ ಸಿನಿಮಂದಿಗೆ ರಾಕಿಂಗ್ ಸ್ಟಾರ್ ಯಶ್ ತಲಾ 5000 ರೂ. ಆರ್ಥಿಕ ನೆರವು ನೀಡುವುದಾಗಿ ಹೇಳಿದ್ದರು.
ಆ ಮಾತನ್ನು ಅವರು ಉಳಿಸಿಕೊಂಡಿದ್ದಾರೆ. ಕಲಾವಿದರ ಅಧಿಕೃತ ಬ್ಯಾಂಕ್ ವಿವರ ತಲುಪಿದ ತಕ್ಷಣ ನೆರವು ನಿಮ್ಮ ಕೈ ಸೇರಲಿದೆ ಎಂದು ಯಶ್ ಹೇಳಿದ್ದರು. ಅದರಂತೇ ನಡೆದುಕೊಂಡಿದ್ದಾರೆ ಕೂಡಾ.
ಅವರಿಂದ ಸಹಾಯ ಧನ ಪಡೆದ ನಟ ಡಿಂಗ್ರಿ ನಾಗರಾಜ್, ಸಹಾಯಕ ನಿರ್ದೇಶಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಖಾತೆಗೆ ಹಣ ಬಂದಿರುವುದಾಗಿ ಹೇಳಿದ್ದಾರೆ. ಅಲ್ಲದೆ, ಯಶ್ ಕೇವಲ ಸಿನಿಮಾ ತೆರೆ ಮೇಲೆ ಮಾತ್ರವಲ್ಲ, ರಿಯಲ್ ಲೈಫ್ ನಲ್ಲೂ ಹೀರೋ ಎಂದು ಕೊಂಡಾಡಿದ್ದಾರೆ.