ಟಾಕ್ಸಿಕ್ ಸಿನಿಮಾ ರಿಲೀಸ್ ಡೇಟ್ ದಿಡೀರ್ ಮುಂದೂಡಿಕೆ: ಈ ನಿರ್ಧಾರಕ್ಕೆ ಕಾರಣ ತಿಳಿಸಿದ ಯಶ್

Krishnaveni K

ಬುಧವಾರ, 4 ಮಾರ್ಚ್ 2026 (10:50 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಾಯಕರಾಗಿರುವ ಟಾಕ್ಸಿಕ್ ಸಿನಿಮಾ ಮಾರ್ಚ್ 19 ಕ್ಕೆ ಬಿಡುಗಡೆಯಾಗುತ್ತದೆ ಎಂದು ಕಾದಿದ್ದ ಪ್ರೇಕ್ಷಕರಿಗೆ ನಿರಾಸೆಯಾಗಿದೆ. ಸಿನಿಮಾ ರಿಲೀಸ್ ದಿನಾಂಕ ದಿಡೀರ್ ಮುಂದೂಡಿಕೆಯಾಗಿದ್ದು ಯಶ್ ಇದಕ್ಕೆ ಕಾರಣವನ್ನೂ ಹೇಳಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ 2 ಸಿನಿಮಾ ಬಳಿಕ ಯಾವುದೇ ಸಿನಿಮಾ ಬಿಡುಗಡೆಯಾಗಿಲ್ಲ. ಟಾಕ್ಸಿಕ್ ಸಿನಿಮಾ ಜಾಗತಿಕ ಮಟ್ಟದಲ್ಲಿ ಮೂಡಿಬಂದಿದ್ದು, ಈ ಸಿನಿಮಾ ನೋಡಲು ಜನ ಈಗಾಗಲೇ ತುದಿಗಾಲಲ್ಲಿ ನಿಂತಿದ್ದಾರೆ. ಚಿತ್ರತಂಡ ಈಗಾಗಲೇ ಟೀಸರ್ ಕೂಡಾ ಹೊರಬಿಟ್ಟಿದೆ.

ಆದರೆ ಈಗ ಮಾರ್ಚ್ 19 ಕ್ಕೆ ಸಿನಿಮಾ ರಿಲೀಸ್ ಆಗುತ್ತಿಲ್ಲ. ಬದಲಾಗಿ ಜೂನ್ 4 ಕ್ಕೆ ಮುಂದೂಡಿಕೆಯಾಗಲಿದೆ. ಬರೋಬ್ಬರಿ 2 ತಿಂಗಳು ಸಿನಿಮಾ ರಿಲೀಸ್ ಮುಂದೂಡಲು ಕಾರಣವೇನೆಂದೂ ಯಶ್ ತಿಳಿಸಿದ್ದಾರೆ.

ಸದ್ಯಕ್ಕೆ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಯುದ್ಧದ ವಾತಾವರಣವಿದೆ. ನಾವು ಸಿನಿಮಾವನ್ನು ಈ ರಾಷ್ಟ್ರಗಳಿಗೂ ಕೊಂಡೊಯ್ಯಲು ಬಯಸಿದ್ದೆವು. ಆದರೆ ಈಗ ಇಲ್ಲಿ ಉದ್ವಿಗ್ನ ವಾತಾವರಣವಿರುವುದರಿಂದ ನಮ್ಮ ಸಿನಿಮಾ ರಿಲೀಸ್ ಮಾಡಲು ಸೂಕ್ತ ಸಮಯವಲ್ಲ ಎನಿಸಿದೆ. ಹೀಗಾಗಿ ಜೂನ್ 4 ಕ್ಕೆ ಬಿಡುಗಡೆ ಮಾಡುತ್ತಿರುವುದಾಗಿ ಯಶ್ ಹಾಗೂ ಚಿತ್ರತಂಡ ಪ್ರಕಟಣೆ ನೀಡಿದೆ. ಇದು ಫ್ಯಾನ್ಸ್ ಗೆ ದೊಡ್ಡ ಶಾಕ್ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ