ಬಿಡುಗಡೆಯಾಯ್ತು ಯುವರತ್ನ ಟ್ರೈಲರ್: ರಾಜ್ಯ ಪ್ರವಾಸಕ್ಕೆ ಟೀಂ ರೆಡಿ
ಇಂದಿನಿಂದ ಚಿತ್ರತಂಡ ರಾಜ್ಯ ಪ್ರವಾಸ ಆರಂಭಿಸಲಿದೆ. ಮೂರು ದಿನಗಳ ಕಾಲ ಯುವರತ್ನ ಜಿಲ್ಲೆ ಜಿಲ್ಲೆಗೂ ಪ್ರವಾಸ ಮಾಡಿ ಸಿನಿಮಾ ಪ್ರಮೋಷನ್ ಮಾಡಲಿದೆ. ಈ ಮೊದಲು ಮೈಸೂರಿನಲ್ಲಿ ಪ್ರಿ ರಿಲೀಸ್ ಈವೆಂಟ್ ಮಾಡಲು ನಿರ್ಧರಿಸಿತ್ತಾದರೂ ಅದನ್ನು ರದ್ದು ಮಾಡಿ ರಾಜ್ಯ ಪ್ರವಾಸ ಮಾಡಲು ತೀರ್ಮಾನಿಸಿದೆ.