ಜನಕ್ಕೆ ಮನಿ ಪ್ರಾಬ್ಲಂ, ಸುಂದರಾಂಗ ಜಾಣಂಗೆ ಇಫೆಕ್ಟ್!
ಬೆಂಗಳೂರು: ಜೇಬು ತುಂಬಾ ಕಾಸಿಲ್ಲದೆ ಪರದಾಡುತ್ತಿರುವ ಜನರಿಂದಾಗಿ ಚಿತ್ರರಂಗದವರಿಗೆ ಕಷ್ಟವಾಗಿದೆ. ನಿರ್ಧರಿಸಿದಂತೆ ಚಿತ್ರ ಬಿಡುಗಡೆ ಮಾಡಲಾಗುತ್ತಿಲ್ಲ. ಲೇಟಾಗಿ ಬರುತ್ತಿರೋ ಸಿನಿಮಾದ ಪಟ್ಟಿಗೆ ಸೇರುತ್ತಿರುವ ಲೇಟೆಸ್ಟ್ ಸಿನಿಮಾ ಸುಂದರಾಂಗ ಜಾಣ.
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ರಮೇಶ್ ಅರವಿಂದ್ ನಿರ್ದೇಶನದ ಸುಂದರಾಂಗ ಜಾಣ ಡಿಸೆಂಬರ್ 9 ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ ಜನ ಹಣವಿಲ್ಲದೆ ಥಿಯೇಟರ್ ಗೆ ಬರಲ್ಲ. ಚಿತ್ರ ಯಶಸ್ವಿಯಾಗಲ್ಲ ಎನ್ನುವ ಕಾರಣಕ್ಕೆ ಡಿಸೆಂಬರ್ 23 ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
ಈ ಮೊದಲು ಜಾನಿ ಜನಾರ್ಧನ್ ಚಿತ್ರ ಕೂಡಾ ಹೀಗೇ ಆಗಿತ್ತು. ನೋಟು ನಿಷೇಧವಾಗಿರದೇ ಹೋಗಿದ್ದರೆ ಇಷ್ಟು ಹೊತ್ತಿಗೆ ಜಾನಿ ಚಿತ್ರ ಬಿಡುಗಡೆಯಾಗಿ ಎರಡು ವಾರವಾಗಬೇಕಿತ್ತು. ಆದರೆ ನೋಟು ನಿಷೇಧದಿಂದಾಗಿ ಡಿಸೆಂಬರ್ 9ಕ್ಕೆ ಬಿಡುಗಡೆಯಾಗುತ್ತಿದೆ. ಸುಂದರಾಂಗ ಜಾಣ ಮುಂದೆ ಹೋಗಿರುವುದರಿಂದ ಜಾನಿ ಚಿತ್ರದ ಗಳಿಕೆಗೆ ಹೊಡೆತ ಬೀಳಲ್ಲ.