ವಿಚ್ಛೇದನ ನಿರ್ಧಾರದ ಬಳಿಕ ಮತ್ತೆ ಒಂದಾಗಿ ಕಾಣಿಸಿಕೊಂಡ ಧನುಷ್-ಐಶ್ವರ್ಯಾ ಜೋಡಿ
ಆದರೆ ಇದೆಲ್ಲಾ ತಮ್ಮ ಮಗ ಯಾತ್ರಾನಿಗಾಗಿ. ಯಾತ್ರಾ ಶಾಲಾ ಕಾರ್ಯಕ್ರಮವೊಂದಕ್ಕಾಗಿ ಈ ಮಾಜಿ ಜೋಡಿ ಜೊತೆಯಾಗಿ ಆಗಮಿಸಿ, ಫೋಟೋಗೆ ಪೋಸ್ ನೀಡಿದೆ.
ಯಾತ್ರಾ ಶಾಲೆಯ ಕ್ಯಾಪ್ಟನ್ ಆಗಿ ಆಯ್ಕೆಯಾದ ಬಳಿಕ ಪ್ರಮಾಣ ಸ್ವೀಕರಿಸುವ ಕಾರ್ಯಕ್ರಮಕ್ಕೆ ಧನುಷ್, ಐಶ್ವರ್ಯಾ ಬಂದಿದ್ದರು. ಇದೇ ಶಾಲೆಯಲ್ಲಿ ಗಾಯಕ ವಿಜಯ್ ಯೇಸುದಾಸ್ ಮಕ್ಕಳೂ ಓದುತ್ತಿದ್ದು, ವಿಜಯ್ ದಂಪತಿಯೂ ಕಾರ್ಯಕ್ರಮದಲ್ಲಿ ಹಾಜರಿದ್ದರು.