'ಕಿಟಕಿ ಗಾಜುಗಳನ್ನು ಒಡೆದರು, 23 ಜನ ಸಜೀವವಾಗಿ ಬೆಂದುಹೋದರು'

ಶನಿವಾರ, 28 ಡಿಸೆಂಬರ್ 2013 (11:28 IST)
PR
PR
ಅನಂತಪುರ: ನಾಂದೇಡ್-ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಶನಿವಾರ ಮುಂಜಾನೆ ಕಾಣಿಸಿಕೊಂಡ ಬೆಂಕಿಯಿಂದ ಕೂಡಲೇ ದಟ್ಟ ಹೊಗೆ ಆವರಿಸಿಕೊಂಡು ಬಿ1 ಹವಾನಿಯಂತ್ರಿತ ಬೋಗಿಯ 23 ಜನರು ಸುಟ್ಟು ಕರಕಲಾಗಿದ್ದಾರೆ. ಬೀದರ್‌ನಿಂದ 11 ಪ್ರಯಾಣಿಕರು ಮತ್ತು ರಾಯಚೂರಿನ ಇಬ್ಬರು ಪ್ರಯಾಣಿಕರು ಆ ಬೋಗಿಯಲ್ಲಿದ್ದರು ಎಂದು ಹೇಳಲಾಗುತ್ತಿದೆ. ಅನಂತಪುರ ಜಿಲ್ಲೆಯ ಕೊಥಚೇರು ರೈಲ್ವೆ ನಿಲ್ದಾಣದಲ್ಲಿ ಈ ದುರ್ಘಟನೆ ಸಂಭವಿಸಿದೆ.
ರೈಲು ಬೆಂಗಳೂರಿನಿಂದ ನಿನ್ನೆ ರಾತ್ರಿ 10.45ಕ್ಕೆ ಹೊರಟಿತ್ತು. ರೈಲು ಅನಂತಪುರ ಜಿಲ್ಲೆಯ ಪ್ರಶಾಂತಿ ನಿಲಯಂ ಆಶ್ರಮದ ಬಳಿ ಮುಂಜಾನೆ 3 ಗಂಟೆಗೆ ತಲುಪಿದ ಸಂದರ್ಭದಲ್ಲಿ ರೈಲಿನ ಬೋಗಿಗೆ ಭಗ್ಗನೇ ಬೆಂಕಿ ಹೊತ್ತಿಕೊಂಡಿತು. ಮುಂಜಾನೆ ಗಾಢ ನಿದ್ರೆಯಲ್ಲಿ ಕೆಲವು ಪ್ರಯಾಣಿಕರಿಗೆ ಎಚ್ಚರವಾಗಿ ಸೇಫ್ಟಿ ಚೈನ್ ಎಳೆದರು,ಇನ್ನೂ ಕೆಲವರು ಕಿಟಕಿ ಗಾಜುಗಳನ್ನು ಒಡೆದು ರೈಲಿನಿಂದ ಕೆಳಕ್ಕೆ ಹಾರಿ ಪ್ರಾಣಉಳಿಸಿಕೊಂಡರು. ಮೈಗೆ ಬೆಂಕಿ ಹೊತ್ತಿಕೊಂಡ ಪ್ರಯಾಣಿಕರ ಆಕ್ರಂದನ ಮುಗಿಲು ಮುಟ್ಟಿತು. ಆದರೆ ಬೆಂಕಿಯ ಜ್ವಾಲೆ ವ್ಯಾಪಿಸಿದ್ದರಿಂದ ಅವರನ್ನು ರಕ್ಷಿಸಲಾಗದೇ ಸಜೀವ ಬೆಂದುಹೋದ ಘಟನೆ ಹೃದಯವಿದ್ರಾವಕವಾಗಿತ್ತು.

ಈ ದುರಂತ ಸಂಭವಿಸಿದ್ದು ಹೇಗೆಂದು ತನಿಖೆ ಮಾಡಲು ದೆಹಲಿಯಿಂದ ಘಟನಾ ಸ್ಥಳಕ್ಕೆ ತನಿಖಾ ತಂಡ ರವಾನೆಯಾಗಿದೆ. . ಗಾಯಾಳುಗಳಿಗೆ ಆಸ್ಪತ್ರೆ ಖರ್ಚು ಸರ್ಕಾರದಿಂದಲೇ ಚಿಕಿತ್ಸೆ ನೀಡಲಾಗುತ್ತದೆ. ಘಟನೆ ಬಗ್ಗೆ ಸರ್ಕಾರಕ್ಕೆ ವಿವರ ನೀಡುತ್ತೇನೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದು, ಮೃತರ ಕುಟುಂಬಗಳಿಗೆ ಐದು ಲಕ್ಷ ಪರಿಹಾರವನ್ನು ಅವರು ಘೋಷಿಸಿದ್ದಾರೆ. ಮೃತರ ದೇಹಗಳು ಸುಟ್ಟು ಕರಕಲಾಗಿರುವುದರಿಂದ ದೇಹಗಳನ್ನು ಗುರುತಿಸುವುದು ಕಷ್ಟಕರವಾಗಿದೆ. ಅಡಕಿ ಜಿ.ಪಂ. ಕ್ಷೇತ್ರದ ಮಾಜಿ ಸದಸ್ಯ ಬೀಮಯ್ಯ ಅವರ ಶವದ ಗುರುತನ್ನು ಅವರ ಪುತ್ರಿ ಸರೋಜಾ ಬೀಮಯ್ಯ ಪತ್ತೆಹಚ್ಚಿದ್ದಾರೆ. ಸಂಜೀವ್ ಕೋಲೂರ್ ಬೆಂಗಳೂರಿನಿಂದ ಯಾದಗಿರಿಗೆ ತೆರಳುತ್ತಿದ್ದರು.
ಮುಂದಿನ ಪುಟದಲ್ಲಿ ಹೆಚ್ಚಿನ ಮಾಹಿತಿ

PR
PR
ಈಶ್ವರ್ ನಾಗ್ರೆ, ಜೂಹಿ ನಾಗ್ರೆ, ಕವಿತಾ ನಾಗ್ರೆ ಬೆಂಗಳೂರಿನಿಂದ ಪುಟ್ಟಪರ್ತಿಗೆ ತೆರಳುತ್ತಿದ್ದರು. ಕಮಲ್ ದೀಪ್‌ ಸಿಂಗ್ ಬೆಂಗಳೂರಿನಿಂದ ಬೀದರ್‌ಗೆ, ವಿವೇಕ್ ಬೆಂಗಳೂರಿನಿಂದ ಮಂತ್ರಾಲಯಕ್ಕೆ, ಇಬ್ರಾಹಿಂ ರಾಹಿ-ಯಶವಂತಪುರದಿಂದ ರಾಯಚೂರಿಗೆ, ಡಾ.ಅಸ್ರಾ, ಯಶವಂತಪುರದಿಂದ ರಾಯಚೂರಿಗೆ, ಅನಿರುದ್ ಕೌಲ್ ನಾಂದೇಡ್, ರಾಹುಲ್ ರಾಯಚೂರಿಗೆ, ಅವಿನಾಶ್ ರೆಡ್ಡಿ-ಅನಂತಪುರಕ್ಕೆ, ಸೌಮ್ಯಾ ರೆಡ್ಡಿ ಅನಂತಪುರಕ್ಕೆ , ಕಿಶೋರ್ ಕುಮಾರ್ ಗುಂಟೂರಿಗೆ ತೆರಳುತ್ತಿದ್ದರೆಂದು ತಿಳಿದುಬಂದಿದೆ. ಮೃ 10 ಮೃತದೇಹಗಳು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆಯಾಗಿದೆ.

ಶಾರ್ಟ್ ಸರ್ಕ್ಯೂಟ್‌ನಿಂದ ಈ ದುರಂತ ನಡೆದಿದೆಯೆಂದು ಪೊಲೀಸರು ಪ್ರಾಥಮಿಕ ಮಾಹಿತಿ ದಾಖಲಿಸಿಕೊಂಡಿದ್ದಾರೆ. 30ರಿಂದ 40 ಜನರನ್ನು ಪುಟ್ಟಪರ್ತಿ, ಧರ್ಮಾವರಂ ಆಸ್ಪತ್ರೆಗೆ ದಾಖಲಿಸಲಾಗಿದೆ. 10 ಜನರ ಸ್ಥಿತಿ ಗಂಭೀರವಾಗಿದೆ. ಮೆಜೆಸ್ಟಿಕ್‌ನಿಂದ 13 ಜನರು ಪ್ರಯಾಣಿಸುತ್ತಿದ್ದರು. ಬೀದರ್‌ನ 11 ಮಂದಿ ಪ್ರಯಾಣಿಕರು ನಾಪತ್ತೆಯಾಗಿದ್ದಾರೆ. 15 ಶವಗಳನ್ನು ಹೊರತೆಗೆಯಲಾಗಿದೆ.

ವೆಬ್ದುನಿಯಾವನ್ನು ಓದಿ