ಕೆಎಸ್‌ಆರ್‌ಟಿಸಿಗೆ ಭಾರೀ ಬರೆ ಎಳೆದ ಕೋರ್ಟ್

ಶುಕ್ರವಾರ, 25 ಅಕ್ಟೋಬರ್ 2013 (21:03 IST)
PR
PR
ಧಾರವಾಡ: ಇವತ್ತು ಧಾರವಾಡದ ಹಳೆಬಸ್‌ನಿಲ್ದಾಣದಲ್ಲಿ ವಕೀಲರು ಬಂದಿದ್ದರು. ವಕೀಲರಿಗೆ ಬಸ್ ನಿಲ್ದಾಣದಲ್ಲಿ ಏನು ಕೆಲಸವೆಂದು ಕೇಳಬೇಡಿ. ವಕೀಲರು ಬಂದಿದ್ದು ಕಾನೂನು ಜಾರಿಯ ಕೆಲಸಕ್ಕಾಗಿಯೇ. ಕೆಎಸ್‌ಆರ್‌ಟಿಸಿ ಬಸ್‌ಗಳ ಜಪ್ತಿಗೆ ವಕೀಲರು ಬಂದಿದ್ದರು. ಅಂಕೋಲಾ ಬಳಿ ಸರ್ಕಾರಿ ಬಸ್ ಡಿಕ್ಕಿಯಿಂದ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಂಗ್ಲೆಂಡಿನ ಡೇವಿಡ್ ಎಂಬವರು ಸಾವನ್ನಪ್ಪಿದ್ದರು. ಪತ್ನಿ ವಿವಿಯನ್ ಮಾರ್ಗರೇಟ್ ಈ ಕುರಿತು ಕೇಸ್ ಹಾಕಿದ್ದರು. ಪ್ರಕರಣ ಕೆಳ ಕೋರ್ಟ್‌ನಿಂದ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿತು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂಕೋರ್ಟ್ 2 ಕೋಟಿ ರೂ. ಪರಿಹಾರ ನೀಡಬೇಕೆಂದು ಸೂಚಿಸಿದ್ದು, ಪರಿಹಾರ ಹಣ ವಸೂಲಿಗೆ ಕೆಎಸ್‌ಆರ್‌ಟಿಸಿ ಬಸ್ಸುಗಳ ಜಪ್ತಿ ಮಾಡಬೇಕೆಂದು ಆದೇಶಿಸಿದೆ. ಇದಕ್ಕಾಗಿ ಇವತ್ತು ವಕೀಲರು ಧಾರವಾಡ ಬಸ್ ನಿಲ್ದಾಣಕ್ಕೆ ಆಗಮಿಸಿ 3 ವೋಲ್ವೋ ಬಸ್ ಮತ್ತು ಎರಡು ಸಾದಾ ಬಸ್‌ಗಳನ್ನು ಜಪ್ತಿ ಮಾಡಿದರು.

ವೆಬ್ದುನಿಯಾವನ್ನು ಓದಿ