ಚುನಾವಣೆಗೆ ತಿಳಿ ಹಾಸ್ಯದ ಸ್ಪರ್ಶ ನೀಡಿದ ಪ್ರಸಂಗಗಳು

ಶುಕ್ರವಾರ, 18 ಏಪ್ರಿಲ್ 2014 (18:39 IST)
PR
PR
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನದ ಗಂಭೀರತೆಯ ನಡುವೆ ಮತದಾನದ ನಿಯಮ ಬದಲಾವಣೆ, ತಪ್ಪು ಕೈಗೆ ಅಥವಾ ಬೆರಳಿಗೆ ಶಾಯಿ ಹಚ್ಚಿದ್ದು, ಆಧಾರ್ ಕಾರ್ಡ್‌ ಸಮಸ್ಯೆಗಳು, ಚುನಾವಣಾಧಿಕಾರಿಗೆ ಪಾಠ ಮುಂತಾದ ಪ್ರಸಂಗಗಳು ಚುನಾವಣೆಗೆ ತಿಳಿ ಹಾಸ್ಯದ ಸ್ಪರ್ಶವನ್ನು ನೀಡಿತು.158ನೇ ಮತಗಟ್ಟೆಯಲ್ಲಿ 15 ಮತದಾರರಿಗೆ ಅವರ ಬಲಗೈ ಹೆಬ್ಬೆಟ್ಟಿಗೆ ಶಾಯಿ ಹಚ್ಚಿದ ಘಟನೆ ನಡೆಯಿತು. ಇದು ಚುನಾವಣೆ ಸಿಬ್ಬಂದಿಯ ಅಜ್ಞಾನದಿಂದ ಉಂಟಾಗಿತ್ತು. ಹವ್ಯಾಸಿ ಪತ್ರಕರ್ತರೊಬ್ಬರಿಗೆ ತಪ್ಪಾಗಿ ಶಾಯಿ ಅದ್ದಿದ ಬೆರಳನ್ನು ವ್ಯಕ್ತಿಯೊಬ್ಬ ತೋರಿಸಿದಾಗ ಘಟನೆ ಬೆಳಕಿಗೆ ಬಂತು.ಹಂಡೇಲು ಮತಗಟ್ಟೆಯಲ್ಲಿ ಧನಕೀರ್ತಿ ಬಾಲಿಪಾ ಎಂಬವರು ಆಧಾರ್ ಕಾರ್ಡ್ ಹಿಡಿದುಕೊಂಡು ಬಂದಿದ್ದರು.

ಆದರೆ ಅಲ್ಲಿನ ಅಧಿಕಾರಿ ಆಧಾರ್ ಕಾರ್ಡ್ ಪ್ರೂಫ್ ಚುನಾವಣೆಗೆ ಅರ್ಹತೆ ಪಡೆದಿಲ್ಲ ಎಂದು ಹೇಳಿದಾಗ ಕೋಪಗೊಂಡ ಮತದಾರ ಮನೆಗೆ ಹೋಗಿ ಇನ್ನೊಂದು ಗುರುತಿನ ಸಾಕ್ಷ್ಯವನ್ನು ತಂದರು.ಚುನಾವಣಾಧಿಕಾರಿಗಳ ಮತದಾರರ ಪಟ್ಟಿಯಲ್ಲಿ ತಾವು ಸತ್ತಿರುವುದಾಗಿ ನಮೂದಿಸಿರುವುದನ್ನು ನೋಡಿ ಕೆಲವು ಮತದಾರಿಗೆ ಶಾಕ್ ಉಂಟಾಯಿತು. ಚುನಾವಣಾಧಿಕಾರಿ ನೀವು ಸತ್ತುಹೋಗಿದ್ದೀರಿ, ನಿಮಗೆ ಮತಹಾಕಲು ಅವಕಾಶವಿಲ್ಲ ಎಂದಾಗ ಮತದಾರರು ದಿಗ್ಬ್ರಾಂತರಾದರು. ಇದರಿಂದ ಮತದಾರರು ಮಾತಿನಚಕಮಕಿಗೆ ಇಳಿದಾಗ ಅಧಿಕಾರಿಗಳು ಮತದಾರರಿಂದ ಲಿಖಿತ ಹೇಳಿಕೆ ಬರೆಸಿಕೊಂಡು ಮತದಾನಕ್ಕೆ ಅವಕಾಶ ನೀಡಿದರು.

ವೆಬ್ದುನಿಯಾವನ್ನು ಓದಿ