ಧಿಕ್ಕಾರದ ಘೋಷಣೆಗಳ ನಡುವೆ 6 ವಿಧೇಯಕಗಳ ಮಂಡನೆ

ಗುರುವಾರ, 28 ನವೆಂಬರ್ 2013 (17:32 IST)
PR
PR
ಬೆಳಗಾವಿ: ಗದ್ದಲದ ನಡುವೆ ಚಳಿಗಾಲದ ಅಧಿವೇಶನ ಸುವರ್ಣಸೌಧದಲ್ಲಿ ಮತ್ತೆ ಮಧ್ಯಾಹ್ನ 3.30ಕ್ಕೆ ಆರಂಭವಾಯಿತು. ವಿಪಕ್ಷಗಳ ಗದ್ದಲದ ನಡುವೆ 6 ವಿಧೇಯಕಗಳನ್ನು ಸರ್ಕಾರ ಮಂಡಿಸಿದೆ. ಕರ್ನಾಟಕ ಮಹಿಳಾ ಆಯೋಗ ತಿದ್ದುಪಡಿ ವಿಧೇಯಕ, ಕರ್ನಾಟಕ ಭೂಕಂದಾಯ ತಿದ್ದುಪಡಿ ವಿಧೇಯಕ, ಕೊಳಚೆ ಪ್ರದೇಶಗಳ ತಿದ್ದುಪಡಿ ವಿಧೇಯಕ, ನಾಗರೀಕ ಸೇವೆಗಳ ವಿಶೇಷ ನೇಮಕಾತಿ ವಿಧೇಯಕ, ಕೈಗಾರಿಕೆಗಳ ಸೌಲಭ್ಯ ತಿದ್ದುಪಡಿ ವಿಧೇಯಕ ಆರೋಗ್ಯ ವಿವಿ ತಿದ್ದುಪಡಿ ವಿಧೇಯಕವನ್ನು, ಪ್ರತಿಪಕ್ಷಗಳ ವಿರೋಧದ ನಡುವೆ ಸರ್ಕಾರ ಮಂಡಿಸಿತು.

ಈ ಸಂದರ್ಭದಲ್ಲಿ ಪ್ರತಿಪಕ್ಷಗಳು ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸುತ್ತಿವೆ. ಈ ನಡುವೆ ಪ್ರತಿಪಕ್ಷಗಳ ಧಿಕ್ಕಾರ, ಧಿಕ್ಕಾರ ಘೋಷಣೆ ಸುವರ್ಣಸೌಧದಲ್ಲಿ ಮೊಳಗಿತು. ಬೇಕು, ಬೇಕು, ನ್ಯಾಯ ಬೇಕು, ಧಿಕ್ಕಾರ, ಧಿಕ್ಕಾರ ಕೂಗಿನ ನಡುವೆ ಆರು ವಿಧೇಯಕಗಳು ಮಂಡನೆಯಾದವು.

ವೆಬ್ದುನಿಯಾವನ್ನು ಓದಿ